alex Certify ಬಾಲಕಿ ಮಾಡಿದ ಎಡವಟ್ಟಿನಿಂದ ಮನೆ ಬಾಗಿಲಿಗೆ ಬಂದು ನಿಂತ 42 ಮಂದಿ ಡೆಲಿವರಿ ಬಾಯ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ಮಾಡಿದ ಎಡವಟ್ಟಿನಿಂದ ಮನೆ ಬಾಗಿಲಿಗೆ ಬಂದು ನಿಂತ 42 ಮಂದಿ ಡೆಲಿವರಿ ಬಾಯ್ಸ್..!

ಆನ್​​ಲೈನ್​ ಫುಡ್​ ಡೆಲಿವರಿ ಅಪ್ಲಿಕೇಶನ್​​ನಲ್ಲಿ ಗ್ರಾಹಕರನ್ನ ಸೆಳೆಯೋಕೆ ಒಂದಿಲ್ಲೊಂದು ಆಫರ್​ಗಳನ್ನ ಕೊಡ್ತಾನೆ ಇರ್ತಾರೆ. ಆದರೆ ತಾಂತ್ರಿಕ ದೋಷ ಅಥವಾ ಇಂಟರ್​ನೆಟ್​ ಸಮಸ್ಯೆಯಿಂದಾಗಿ ಈ ಆನ್​​ಲೈನ್​ ಅಪ್ಲಿಕೇಶನ್​ ಬಳಕೆ ಒಮ್ಮೊಮ್ಮೆ ಕಿರಿಕಿರಿ ಎನಿಸಿಬಿಡುತ್ತೆ.

ಇಂತಹದ್ದೇ ವಿಚಿತ್ರ ಘಟನೆಯಲ್ಲಿ ಫಿಲಿಫೈನ್ಸ್​​ನಲ್ಲಿದ್ದ ಮನೆಯೊಂದರ ಮುಂದೆ 40ಕ್ಕೂ ಹೆಚ್ಚು ಆರ್ಡರ್​​ಗಳು ಸರತಿ ಸಾಲಲ್ಲಿ ಬಂದು ನಿಂತಿದೆ.

ಊಟಕ್ಕೆಂದು ಅಜ್ಜಿ ಹಾಗೂ ಮೊಮ್ಮಗಳು ಚಿಕನ್​​ನ ಕೆಲ ಖಾದ್ಯಗಳನ್ನ ಬುಕ್​ ಮಾಡಿದ್ದರು. ಆದರೆ ಇಂಟರ್ನೆಟ್​ ಸಮಸ್ಯೆಯಿಂದ ಬಾಲಕಿ ಹಲವಾರು ಬಾರಿ ಬುಕಿಂಗ್​ ಆಪ್ಶನ್​ ಕ್ಲಿಕ್​ ಮಾಡಿದ ಕಾರಣ ಬರೋಬ್ಬರಿ 42 ಮಂದಿ ಡೆಲಿವರಿ ಬಾಯ್ಸ್ ಫುಡ್​ ಸಮೇತ ಬಂದು ಮನೆಯ ಮುಂದೆ ನಿಂತಿದ್ದಾರೆ.

ಏಳು ವರ್ಷದ ಬಾಲಕಿ ತನ್ನ ಪೋಷಕರು ಕೆಲಸಕ್ಕೆಂದು ಮನೆಯಿಂದ ಹೊರಹೋದಾಗ ಹಲವು ಬಾರಿ ಆನ್​​ಲೈನ್​​ನಲ್ಲಿ ಫುಡ್​ ಆರ್ಡರ್​ ಮಾಡಿದ್ದಳು. ಆದರೆ ಇದೇ ಮೊದಲ ಬಾರಿಗೆ ಬಾಲಕಿಯಿಂದ ಇಂತಹದ್ದೊಂದು ಪ್ರಮಾದವಾಗಿದೆ. ಬಾಲಕಿ ತಾನು ಮಾಡಿದ ತಪ್ಪಿನಿಂದಾಗಿ ಒಂದೇ ಸಮನೆ ಅಳಲು ಆರಂಭಿಸಿದ್ದಾಳೆ. ಈ ಘಟನೆ ನೋಡಿ ಮರುಗಿದ ಸ್ಥಳೀಯರು ಸ್ವಯಂ ಪ್ರೇರಿತರಾಗಿ ಕೆಲ ಆಹಾರಗಳನ್ನ ಖರೀದಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...