ಈ ವರ್ಷದ ಜುಲೈನಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ತರೋದಾಗಿ ಓಲಾ ಎಲೆಕ್ಟ್ರಿಕ್ ಹೇಳಿದೆ. ಹೈಪರ್ ಚಾರ್ಜರ್ ನೆಟ್ವರ್ಕ್ ಸ್ಥಾಪಿಸಲು ಮುಂದಾಗಿರುವ ಓಲಾ ಎಲೆಕ್ಟ್ರಿಕ್ ದೇಶದ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ಪಾಯಿಂಟ್ಗಳನ್ನ ನಿರ್ಮಿಸಲಿದೆ.
ಕಳೆದ ವರ್ಷ ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆ ಆರಂಭಿಸಿದ್ದ ಓಲಾ ಇದಕ್ಕಾಗಿ 2400 ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಇದಾದ ಬಳಿಕ ಕಂಪನಿಯು 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಲಿದೆ.
ನಾವು 2 ಮಿಲಿಯನ್ ಸ್ಕೂಟರ್ಗಳನ್ನ ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಜೂನ್ನಲ್ಲಿ ಕಾರ್ಖಾನೆ ಕಾರ್ಯ ಪೂರ್ಣಗೊಳ್ಳುತ್ತೆ ಹಾಗೂ ಜುಲೈನಿಂದ ಕಂಪನಿ ಸ್ಕೂಟರ್ಗಳನ್ನ ಮಾರಾಟ ಮಾಡಲಿದೆ ಎಂದು ಓಲಾ ಚೇರ್ಮನ್ ಹಾಗೂ ಗ್ರೂಪ್ ಸಿಇಓ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಓಲಾ ಕಂಪನಿ ಇಲ್ಲಿಯವರೆಗೆ ಸ್ಕೂಟರ್ ದರವನ್ನ ಬಹಿರಂಗಗೊಳಿಸಿಲ್ಲ.
ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನೇ ಲಾಂಚ್ ಮಾಡಿದರೆ ಸಾಲದು. ಸೂಕ್ತ ಸ್ಥಳಗಳಲ್ಲಿ ಚಾರ್ಜಿಂಗ್ ನೆಟ್ವರ್ಕ್ಗಳೂ ಇವೆ. ಹೀಗಾಗಿ ಹೈಪರ್ ಚಾರ್ಜರ್ ನೆಟ್ವರ್ಕ್ಗಳ ಸ್ಥಾಪನೆಗೆ ಶ್ರಮಿಸುತ್ತಿದ್ದೇವೆ. ಸರಿ ಸುಮಾರು 400 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ಗಳನ್ನ ನಿರ್ಮಾಣ ಮಾಡಲಿದ್ದೇವೆ ಎಂದು ಭವಿಶ್ ಹೇಳಿದ್ರು.