alex Certify ರೆಸ್ಟೋರೆಂಟ್‌ ಸಿಬ್ಬಂದಿಗೆ ಬರೋಬ್ಬರಿ 5600 ಡಾಲರ್ ಟಿಪ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್‌ ಸಿಬ್ಬಂದಿಗೆ ಬರೋಬ್ಬರಿ 5600 ಡಾಲರ್ ಟಿಪ್…!

Ohio Man Leaves 5,600 Dollars as Tip for Entire Restaurant Staff ahead of Christmas

ಜಗತ್ತಿನಲ್ಲಿ ಕರುಣಾಮಯಿಗಳು ಬಹಳಷ್ಟು ಮಂದಿ ಇದ್ದಾರೆ. ಓಹಿಯೋ ರಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ $5600ಗಳ ಟಿಪ್ ಕೊಡುವ ಮೂಲಕ ಅವರೆಲ್ಲರ ಹೃದಯ ಗೆದ್ದಿದ್ದಾರೆ.

ಇಲ್ಲಿನ ಟೊಲೆಡೋ ಪಟ್ಟಣದಲ್ಲಿರುವ ಸೌಕ್ ಮೆಡಿಟರೇನಿಯನ್ ಕಿಚನ್‌ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದ ಈ ವ್ಯಕ್ತಿ ತಮ್ಮ ಹೆಸರನ್ನು ಹೇಳಲು ಇಚ್ಛಿಸಿಲ್ಲ. ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಎಲ್ಲಾ 28 ಮಂದಿಗೂ ತಲಾ $200ನಂತೆ ಟಿಪ್ ಕೊಟ್ಟು ಹೊರಟಿದ್ದಾರೆ ಈ ದಿಲ್‌ದಾರ್‌ ವ್ಯಕ್ತಿ.

2019ರಲ್ಲಿ ತೆರೆಯಲಾದ ಈ ರೆಸ್ಟೋರೆಂಟ್‌ ಕೋವಿಡ್-19 ಕಾರಣದಿಂದಾಗಿ ಈ ವರ್ಷ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಸುಧಾರಿಸಿಕೊಳ್ಳಲು ಭಾರೀ ಪ್ರಯಾಸ ಪಡುತ್ತಿತ್ತು. ಈ ವ್ಯಕ್ತಿ ತೋರಿದ ಹೃದಯ ಶ್ರೀಮಂತಿಕೆಯಿಂದ ತಮ್ಮ ಸಿಬ್ಬಂದಿ ವರ್ಗಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ ಎಂದು ರೆಸ್ಟೋರಂಟ್‌ ಮಾಲೀಕ  ಹೇಳುತ್ತಾರೆ.

So just before we closed today at Nighttown a customer walked in and ordered a beer and asked for the check and handed…

Posted by Brendan Ring on Sunday, November 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...