ಜಗತ್ತಿನಲ್ಲಿ ಕರುಣಾಮಯಿಗಳು ಬಹಳಷ್ಟು ಮಂದಿ ಇದ್ದಾರೆ. ಓಹಿಯೋ ರಸ್ಟೋರೆಂಟ್ಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ $5600ಗಳ ಟಿಪ್ ಕೊಡುವ ಮೂಲಕ ಅವರೆಲ್ಲರ ಹೃದಯ ಗೆದ್ದಿದ್ದಾರೆ.
ಇಲ್ಲಿನ ಟೊಲೆಡೋ ಪಟ್ಟಣದಲ್ಲಿರುವ ಸೌಕ್ ಮೆಡಿಟರೇನಿಯನ್ ಕಿಚನ್ ರೆಸ್ಟೋರೆಂಟ್ಗೆ ಭೇಟಿ ಕೊಟ್ಟಿದ್ದ ಈ ವ್ಯಕ್ತಿ ತಮ್ಮ ಹೆಸರನ್ನು ಹೇಳಲು ಇಚ್ಛಿಸಿಲ್ಲ. ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಎಲ್ಲಾ 28 ಮಂದಿಗೂ ತಲಾ $200ನಂತೆ ಟಿಪ್ ಕೊಟ್ಟು ಹೊರಟಿದ್ದಾರೆ ಈ ದಿಲ್ದಾರ್ ವ್ಯಕ್ತಿ.
2019ರಲ್ಲಿ ತೆರೆಯಲಾದ ಈ ರೆಸ್ಟೋರೆಂಟ್ ಕೋವಿಡ್-19 ಕಾರಣದಿಂದಾಗಿ ಈ ವರ್ಷ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಸುಧಾರಿಸಿಕೊಳ್ಳಲು ಭಾರೀ ಪ್ರಯಾಸ ಪಡುತ್ತಿತ್ತು. ಈ ವ್ಯಕ್ತಿ ತೋರಿದ ಹೃದಯ ಶ್ರೀಮಂತಿಕೆಯಿಂದ ತಮ್ಮ ಸಿಬ್ಬಂದಿ ವರ್ಗಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ ಎಂದು ರೆಸ್ಟೋರಂಟ್ ಮಾಲೀಕ ಹೇಳುತ್ತಾರೆ.
https://www.facebook.com/brendan.ring.587/posts/10218608622430301