alex Certify ರೈಲು ಪ್ರಯಾಣಿಕರರಿಗೆ ಮತ್ತೊಂದು ಗುಡ್ ನ್ಯೂಸ್: ಎಲ್ಲಾ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರರಿಗೆ ಮತ್ತೊಂದು ಗುಡ್ ನ್ಯೂಸ್: ಎಲ್ಲಾ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್ ಲಭ್ಯ

ನವದೆಹಲಿ: ಮೆಗಾ ರಾಷ್ಟ್ರೀಯ ರೈಲು ಯೋಜನೆ (ಎನ್​ಆರ್​ಪಿ) 2030 ಜಾರಿಗೆ ಬಂದ ಬಳಿಕ ಪ್ರಯಾಣಿಕರು ದೃಢೀಕರಣಗೊಂಡ ರೈಲ್ವೇ ಟಿಕೆಟ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

ಭಾರತೀಯ ರೈಲ್ವೆ ಇಲಾಖೆ ರಾಷ್ಟ್ರೀಯ ರೈಲು ಯೋಜನೆ 2030ಯನ್ನು ಸಿದ್ಧಪಡಿಸುತ್ತಿದೆ. ಹಾಗೂ ಈ ಯೋಜನೆ ಸಂಬಂಧ ಸಾರ್ವಜನಿಕರಿಂದ ಮತ್ತು ವಿವಿಧ ಸಚಿವಾಲಯಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಎನ್​ಆರ್​ಪಿ 2030 ಪ್ರಕಾರ ಪ್ರತಿ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್​​ಗಳು ಲಭ್ಯವಾಗಲಿದ್ದು, ಯಾವುದೇ ವೇಟ್ ಲಿಸ್ಟ್ ಗಳು ಇರೋದಿಲ್ಲ ಎಂದು ಹೇಳಿದೆ.

ಅಲ್ಲದೇ ರಾಷ್ಟ್ರೀಯ ರೈಲು ಯೋಜನೆ 2030 ಮೂಲಕ ಭಾರತೀಯ ರೈಲ್ವೆ ಇಲಾಖೆ ಹೆಚ್ಚಿನ ಆದಾಯ ಗಳಿಸುವತ್ತಲೂ ಗಮನ ಹರಿಸಿದೆ. ದೇಶದ ಒಟ್ಟು ಸರಕು ಸಾಗಣೆಯ ಶೇಕಡ 47 ರಷ್ಟು ಸಾಗಣೆ ಪೂರೈಸುವ ಗುರಿಯನ್ನ ಭಾರತೀಯ ರೈಲ್ವೆ ಇಲಾಖೆ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...