alex Certify BIG NEWS: ಕೃಷಿ ಕ್ಷೇತ್ರ ಪ್ರವೇಶದ ಕುರಿತು ರಿಲಯನ್ಸ್‌ ಜಿಯೋದಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೃಷಿ ಕ್ಷೇತ್ರ ಪ್ರವೇಶದ ಕುರಿತು ರಿಲಯನ್ಸ್‌ ಜಿಯೋದಿಂದ ಮಹತ್ವದ ಹೇಳಿಕೆ

ರಿಲಯನ್ಸ್ ಕಂಪನಿ ಒಡೆತನದ ಜಿಯೋ ನೆಟ್​ವರ್ಕ್​ನ ಟವರ್​ಗಳು ಹಾಗೂ ಸೇವಾ ಮಳಿಗೆಗಳಿಗೆ ಉಂಟಾಗುತ್ತಿರುವ ಹಾನಿ ವಿರುದ್ಧ ಸರ್ಕಾರಗಳ ತುರ್ತು ಹಸ್ತಕ್ಷೇಪ ಕೋರಿ ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್ ಸೋಮವಾರ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ಗೆ ಮೊರೆ ಹೋಗಿದೆ. ಮುಕೇಶ್​ ಅಂಬಾನಿ ಒಡೆತನದ ಟೆಲಿಕಾಂ ಘಟಕವು ದುಷ್ಕರ್ಮಿಗಳು ಈ ರೀತಿ ತೊಂದರೆ ನೀಡಲು ವ್ಯಾಪಾರ ಪ್ರತಿಸ್ಪರ್ಧಿಗಳು ನೆರವು ನೀಡಿದ್ದಾರೆ ಎಂದು ಆರೋಪಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಿಲಯನ್ಸ್ ಜಿಯೋ, ದುಷ್ಕರ್ಮಿಗಳ ಕೃತ್ಯದಿಂದಾಗಿ ಸಾವಿರಾರು ಉದ್ಯೋಗಿಗಳ ಕೆಲಸಕ್ಕೆ ಅಪಾಯ ಉಂಟಾಗುವಂತಾಗಿದೆ. ಈ ಎರಡು ರಾಜ್ಯಗಳಲ್ಲಿ ನಮ್ಮ ಘಟಕ ನಡೆಸುತ್ತಿರುವ ಮೂಲ ಸೌಕರ್ಯ ಹಾಗೂ ಸೇವಾ ಮಳಿಗೆಗಳಿಗೆ ಹಾನಿ ಹಾಗೂ ಅಡ್ಡಿ ಉಂಟು ಮಾಡಲಾಗಿದೆ. ಈ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡ ದುಷ್ಕರ್ಮಿಗಳಿಗೆ ವ್ಯಾಪಾರ ಪ್ರತಿಸ್ಪರ್ಧಿಗಳು ಸಾಥ್​ ನೀಡಿದ್ದಾರೆ ಎಂದು ಆರೋಪಿಸಿದೆ.

ಪಂಜಾಬ್​ನಲ್ಲಿ 9000 ಜಿಯೋ ಟವರ್​ಗಳಲ್ಲಿ ಸುಮಾರು 1500 ಟವರ್​ಗಳಿಗೆ ವಿದ್ಯುತ್​ ಸರಬರಾಜನ್ನ ಕಡಿತಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೇ ನೆಪ ಮಾಡಿಕೊಂಡು ರಿಲಯನ್ಸ್ ಕಂಪನಿಯ ವಿವಿಧ ಮಳಿಗೆಗಳನ್ನ ಟಾರ್ಗೆಟ್​​ ಮಾಡಲಾಗಿದೆ ಎನ್ನಲಾಗಿದ್ದು, ಇದರ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಾನು ಈ ಹಿಂದೆ ಯಾವುದೇ ಕಾರ್ಪೋರೇಟ್ ಅಥವಾ ಗುತ್ತಿಗೆ ಕೃಷಿಯನ್ನು ಮಾಡಿಲ್ಲ ಮತ್ತು ಈ ವ್ಯವಹಾರವನ್ನು ಪ್ರವೇಶಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್​​ ಲಿಮಿಟೆಡ್​ಗೂ ಕೃಷಿ ಮಸೂದೆಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...