alex Certify ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…?

ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ ಏರಿಕೆ ಸಾಧಿಸಿದರೂ ಸಹ, ಈ ವಿಚಾರದಲ್ಲಿ ರೀಟೇಲರ್‌ಗಳ ಮಟ್ಟದಲ್ಲಿ ಅಂಥ ಪ್ರಗತಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹೋಲ್‌ಸೇಲ್ ಡೀಲರ್‌ ಮಟ್ಟದಲ್ಲಿ ಡೆಲಿವರಿಯಲ್ಲಿ ಏರಿಕೆ ಕಂಡುಬಂದರೂ ಸಹ ರೀಟೇಲರ್‌ಗಳ ಮಟ್ಟದಲ್ಲಿ ಕಾರುಗಳ ಖರೀದಿಯು 24%ನಷ್ಟು ತಗ್ಗಿದೆ ಎಂದು ರೀಟೇಲರ್‌ಗಳು ಹೇಳುತ್ತಿದ್ದಾರೆ.

ಆಟೋಮೊಬೈಲ್ ಡೀಲರ್‌ಗಳ ಸಂಘ (ಫಡಾ) ಹೇಳುವ ಪ್ರಕಾರ ಅಕ್ಟೋಬರ್‌ ತಿಂಗಳಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ 27% ಇಳಿಕೆ ಕಂಡುಬಂದಿದ್ದು, ಪ್ರಯಾಣಿಕ ವಾಹನಗಳ ಮಾರಾಟದಲ್ಲಿ 9% ಇಳಿಕೆ ಕಂಡುಬಂದಿದೆ.

ವಾಣಿಜ್ಯ ವಾಹನಗಳ ಮಾರಾಟದಲ್ಲಿ 30% ಹಾಗೂ ತ್ರಿಚಕ್ರ ವಾಹನಗಳ ಮಾರಾಟದಲ್ಲಿ 65% ಇಳಿಕೆಯಾಗಿದೆ ಎಂದು ಫಡಾ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...