ಹಬ್ಬದ ಮಾಸದಲ್ಲಿ ಸಖತ್ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…?
ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್ ತಿಂಗಳಲ್ಲಿ ಎರಡಂಕಿಯ ಏರಿಕೆ ಸಾಧಿಸಿದರೂ ಸಹ, ಈ ವಿಚಾರದಲ್ಲಿ ರೀಟೇಲರ್‌ಗಳ ಮಟ್ಟದಲ್ಲಿ ಅಂಥ ಪ್ರಗತಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಹೋಲ್‌ಸೇಲ್ ಡೀಲರ್ ಮಟ್ಟದಲ್ಲಿ ಡೆಲಿವರಿಯಲ್ಲಿ ಏರಿಕೆ ಕಂಡುಬಂದರೂ ಸಹ ರೀಟೇಲರ್‌ಗಳ ಮಟ್ಟದಲ್ಲಿ ಕಾರುಗಳ ಖರೀದಿಯು 24%ನಷ್ಟು ತಗ್ಗಿದೆ ಎಂದು ರೀಟೇಲರ್‌ಗಳು ಹೇಳುತ್ತಿದ್ದಾರೆ.
ಆಟೋಮೊಬೈಲ್ ಡೀಲರ್‌ಗಳ ಸಂಘ (ಫಡಾ) ಹೇಳುವ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ 27% ಇಳಿಕೆ ಕಂಡುಬಂದಿದ್ದು, ಪ್ರಯಾಣಿಕ ವಾಹನಗಳ ಮಾರಾಟದಲ್ಲಿ 9% ಇಳಿಕೆ ಕಂಡುಬಂದಿದೆ.
ವಾಣಿಜ್ಯ ವಾಹನಗಳ ಮಾರಾಟದಲ್ಲಿ 30% ಹಾಗೂ ತ್ರಿಚಕ್ರ ವಾಹನಗಳ ಮಾರಾಟದಲ್ಲಿ 65% ಇಳಿಕೆಯಾಗಿದೆ ಎಂದು ಫಡಾ ಹೇಳಿಕೊಂಡಿದೆ.