alex Certify BIG NEWS: ದೆಹಲಿ -ಜೈಪುರ ನಡುವೆ ನಿರ್ಮಾಣವಾಗಲಿದೆ ದೇಶದ ಮೊದಲ ಎಲೆಕ್ಟ್ರಿಕ್ ಹೆದ್ದಾರಿ, ವಾಹನಗಳು ಹೇಗೆ ಓಡುತ್ತವೆ ಗೊತ್ತಾ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೆಹಲಿ -ಜೈಪುರ ನಡುವೆ ನಿರ್ಮಾಣವಾಗಲಿದೆ ದೇಶದ ಮೊದಲ ಎಲೆಕ್ಟ್ರಿಕ್ ಹೆದ್ದಾರಿ, ವಾಹನಗಳು ಹೇಗೆ ಓಡುತ್ತವೆ ಗೊತ್ತಾ?

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂಬರುವ ದಿನಗಳಲ್ಲಿ ದೆಹಲಿ ಮತ್ತು ಜೈಪುರ ನಡುವೆ ದೇಶದ ಮೊದಲ ವಿದ್ಯುತ್ ಹೆದ್ದಾರಿ ಶೀಘ್ರದಲ್ಲೇ ಸಿದ್ಧವಾಗಲಿದೆ. ದೆಹಲಿ ಮತ್ತು ಜೈಪುರ ನಡುವೆ ಭಾರತದ ಮೊದಲ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಿಸುವುದು ನನ್ನ ಕನಸಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸರ್ಕಾರಕ್ಕೆ 47 ಪ್ರಸ್ತಾವನೆ

ರಾಜಧಾನಿ ದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಮಣಿಪುರ, ಸಿಕ್ಕಿಂ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿ ರೋಪ್‌ ವೇ ಕೇಬಲ್‌ಗಳನ್ನು ಸ್ಥಾಪಿಸಲು ಸರ್ಕಾರವು ಇದುವರೆಗೆ 47 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಹೇಳಿದರು. ದೆಹಲಿ ಮತ್ತು ಜೈಪುರ ನಡುವೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಿಸುವುದು ನನ್ನ ಕನಸು ಎಂದು ಅವರು ಹೇಳಿದರು.

1.99 ಲಕ್ಷ ಕೋಟಿ ರೂ. ಮೀಸಲು

ತಮ್ಮ ಸಚಿವಾಲಯವು ಬೃಹತ್ ಬಜೆಟ್ ಹೊಂದಿದ್ದು, ಮಾರುಕಟ್ಟೆಯೂ ಬೆಂಬಲಿಸಲು ಸಿದ್ಧವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಬಜೆಟ್‌ನಲ್ಲಿ ರಸ್ತೆ ಮತ್ತು ಸಾರಿಗೆ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರೂ. ಕಾಯ್ದಿರಿಸಿದ್ದಾರೆ ಎಂದು ಎಂದು ಸಚಿವರು ಹೇಳಿದರು.

ಹೇಗಿರುತ್ತೆ ಎಲೆಕ್ಟ್ರಾನಿಕ್ ಹೆದ್ದಾರಿ…?

ಎಲೆಕ್ಟ್ರಾನಿಕ್ ಹೆದ್ದಾರಿ ಅಥವಾ ಹಸಿರು ಹೆದ್ದಾರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಂತಹ ಹೆದ್ದಾರಿಗಳಲ್ಲಿ ಸಾಕಷ್ಟು ಹಸಿರು ಹೊಂದುವುದರೊಂದಿಗೆ, ಪರಿಸರಕ್ಕಾಗಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಲೇನ್ ಇರಲಿದ್ದು, ಕೇಬಲ್ ಮೂಲಕ ವಾಹನಗಳು ಸಂಚರಿಸುತ್ತವೆ. ಇದರ ಮೇಲೆ ಸರ್ಕಾರದಿಂದ ಕೇಬಲ್‌ ನಿಂದ ವಿಶೇಷ ಬಸ್‌ಗಳು ಮತ್ತು ರೈಲುಗಳನ್ನು ಓಡಿಸಲಾಗುವುದು. ಈ ಬಸ್‌ ಗಳು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸಲಿವೆ.

ಈ ಹೆದ್ದಾರಿಯ ಎರಡೂ ಬದಿಗಳಲ್ಲಿ ವಿದ್ಯುತ್ ತಂತಿಗಳನ್ನು ಹಾಕಲಾಗುವುದು. ಇದರ ಮೇಲೆ ಭಾರೀ ವಾಹನಗಳು ಕೂಡ ಹೆಚ್ಚಿನ ವೇಗದಲ್ಲಿ ಓಡಲು ಸಾಧ್ಯವಾಗುತ್ತದೆ. ಇದು ಕಡಿಮೆ ಮಾಲಿನ್ಯವನ್ನು ಹರಡುತ್ತದೆ. ಪೆಟ್ರೋಲ್-ಡೀಸೆಲ್‌ಗೆ ಪರ್ಯಾಯವಾಗಿ ಅಂತಹ ಹೆದ್ದಾರಿಯನ್ನು ಸರ್ಕಾರ ನೋಡುತ್ತಿದೆ. ಇ-ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳು ಇರುತ್ತವೆ. ಇದರ ಮೇಲೆ, ಎಲೆಕ್ಟ್ರಿಕ್ ಬಸ್‌ ಗಳ ಮೂಲಕ, ಸಾಮಾನ್ಯ ಜನರು ಸಹ ಕಡಿಮೆ ಸಮಯದಲ್ಲಿ ಮಾಲಿನ್ಯ ಮುಕ್ತ ಪ್ರಯಾಣವನ್ನು ಆನಂದಿಸಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...