alex Certify ನಾನು ಹಣಕಾಸು ಇಲಾಖೆಯಿಂದ ನಿರ್ಗಮಿಸಲು ನಿರ್ಮಲಾ ಸೀತಾರಾಮನ್​ ಕಾರಣವೆಂದ ಗಾರ್ಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಹಣಕಾಸು ಇಲಾಖೆಯಿಂದ ನಿರ್ಗಮಿಸಲು ನಿರ್ಮಲಾ ಸೀತಾರಾಮನ್​ ಕಾರಣವೆಂದ ಗಾರ್ಗ್

Nirmala wanted me out of finance ministry, says former finance secretary Subhash Chandra Garg - Times of India

ಪ್ರಧಾನಿ ಮೋದಿಯವರ ಎರಡನೇ ಅವಧಿಯ ಸರ್ಕಾರ ಮೊದಲ ಬಜೆಟ್​​ ಮಂಡಿಸುವ ವೇಳೆ ಹಣಕಾಸು ಸಚಿವಾಲಯದಿಂದ ಹೊರಗುಳಿದಿದ್ದ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್​ ಚಂದ್ರ ಗಾರ್ಗ್​ ನನ್ನನ್ನ ಹಣಕಾಸು ಇಲಾಖೆಯಿಂದ ಹೊರಹಾಕಿದ್ದೇ ನಿರ್ಮಲಾ ಸೀತಾರಾಮನ್​ ಅಂತಾ ಆರೋಪಿಸಿದ್ದಾರೆ. ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲೇ ಅಂದ್ರೆ ಜೂನ್​ 2019ರಲ್ಲಿ ನನ್ನನ್ನ ಇಲಾಖೆಯಿಂದ ವರ್ಗಾವಣೆ ಮಾಡಿದ್ದಾರೆ ಅಂತಾ ಹೇಳಿದ್ರು.

ಹಣಕಾಸು ಇಲಾಖೆಯಿಂದ ವರ್ಗಾವಣೆಗೊಂಡ ಬಳಿಕ ತಮ್ಮ ಅನುಭವವನ್ನ ಬ್ಲಾಗ್​ನಲ್ಲಿ ಹಂಚಿಕೊಂಡ ಸುಭಾಷ್​ ಚಂದ್ರ ಗಾರ್ಗ್​, ನಿರ್ಮಲಾ ಸೀತಾರಾಮನ್​ ಜೊತೆ ಕೆಲಸ ಮಾಡುವುದು ಭಾರೀ ಕಷ್ಟ ಅಂತಾ ಹೇಳಿದ್ದಾರೆ .

ನಾನು ದಿ. ಅರುಣ್​ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗಲೂ ಹಣಕಾಸು ಇಲಾಖೆಯಲ್ಲಿದ್ದೆ. ಆದರೆ ನನಗೆಂದೂ ಅವರ ಜೊತೆ ಕೆಲಸ ಮಾಡೋದು ಕಷ್ಟಕರ ಅಂತಾ ಅನಿಸಲೇ ಇಲ್ಲ. ಆದರೆ ನಿರ್ಮಲಾ ಸೀತಾರಾಮನ್​ ಆರ್ಥಿಕ ನೀತಿ, ಕೌಶಲ್ಯ, ಸೇರಿದಂತೆ ಹಲವಾರು ವಿಚಾರಗಳಲ್ಲಿ ತನ್ನದೇ ಆದ ಸಿದ್ದಾಂತವನ್ನ ಹೊಂದಿದ್ದಾರೆ. ಹೀಗಾಗಿ ನನಗೆ ಇವರ ಜೊತೆ ಕೆಲಸ ಮಾಡೋದು ಆರಾಮದಾಯಕ ಅಂತಾ ಎನಿಸಲೇ ಇಲ್ಲ ಅಂತಾ ಬರೆದುಕೊಂಡಿದ್ದಾರೆ.

ತಮ್ಮ ಸ್ವಯಂ ಪ್ರೇರಿತ ನಿವೃತ್ತಿಗೆ ಕಾರಣ ನೀಡಿರುವ ಗಾರ್ಗ್​ ಅವರ ಬ್ಲಾಗ್ ಕುರಿತು ಪ್ರತಿಕ್ರಿಯಿಸಲು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ನಿರ್ಮಲಾ ಸೀತಾರಾಮನ್​ ಕಚೇರಿ ನಿರಾಕರಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...