![Nirmala wanted me out of finance ministry, says former finance secretary Subhash Chandra Garg - Times of India](https://static.toiimg.com/photo/msid-78969604/78969604.jpg)
ಪ್ರಧಾನಿ ಮೋದಿಯವರ ಎರಡನೇ ಅವಧಿಯ ಸರ್ಕಾರ ಮೊದಲ ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವಾಲಯದಿಂದ ಹೊರಗುಳಿದಿದ್ದ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ನನ್ನನ್ನ ಹಣಕಾಸು ಇಲಾಖೆಯಿಂದ ಹೊರಹಾಕಿದ್ದೇ ನಿರ್ಮಲಾ ಸೀತಾರಾಮನ್ ಅಂತಾ ಆರೋಪಿಸಿದ್ದಾರೆ. ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲೇ ಅಂದ್ರೆ ಜೂನ್ 2019ರಲ್ಲಿ ನನ್ನನ್ನ ಇಲಾಖೆಯಿಂದ ವರ್ಗಾವಣೆ ಮಾಡಿದ್ದಾರೆ ಅಂತಾ ಹೇಳಿದ್ರು.
ಹಣಕಾಸು ಇಲಾಖೆಯಿಂದ ವರ್ಗಾವಣೆಗೊಂಡ ಬಳಿಕ ತಮ್ಮ ಅನುಭವವನ್ನ ಬ್ಲಾಗ್ನಲ್ಲಿ ಹಂಚಿಕೊಂಡ ಸುಭಾಷ್ ಚಂದ್ರ ಗಾರ್ಗ್, ನಿರ್ಮಲಾ ಸೀತಾರಾಮನ್ ಜೊತೆ ಕೆಲಸ ಮಾಡುವುದು ಭಾರೀ ಕಷ್ಟ ಅಂತಾ ಹೇಳಿದ್ದಾರೆ .
ನಾನು ದಿ. ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗಲೂ ಹಣಕಾಸು ಇಲಾಖೆಯಲ್ಲಿದ್ದೆ. ಆದರೆ ನನಗೆಂದೂ ಅವರ ಜೊತೆ ಕೆಲಸ ಮಾಡೋದು ಕಷ್ಟಕರ ಅಂತಾ ಅನಿಸಲೇ ಇಲ್ಲ. ಆದರೆ ನಿರ್ಮಲಾ ಸೀತಾರಾಮನ್ ಆರ್ಥಿಕ ನೀತಿ, ಕೌಶಲ್ಯ, ಸೇರಿದಂತೆ ಹಲವಾರು ವಿಚಾರಗಳಲ್ಲಿ ತನ್ನದೇ ಆದ ಸಿದ್ದಾಂತವನ್ನ ಹೊಂದಿದ್ದಾರೆ. ಹೀಗಾಗಿ ನನಗೆ ಇವರ ಜೊತೆ ಕೆಲಸ ಮಾಡೋದು ಆರಾಮದಾಯಕ ಅಂತಾ ಎನಿಸಲೇ ಇಲ್ಲ ಅಂತಾ ಬರೆದುಕೊಂಡಿದ್ದಾರೆ.
ತಮ್ಮ ಸ್ವಯಂ ಪ್ರೇರಿತ ನಿವೃತ್ತಿಗೆ ಕಾರಣ ನೀಡಿರುವ ಗಾರ್ಗ್ ಅವರ ಬ್ಲಾಗ್ ಕುರಿತು ಪ್ರತಿಕ್ರಿಯಿಸಲು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ನಿರ್ಮಲಾ ಸೀತಾರಾಮನ್ ಕಚೇರಿ ನಿರಾಕರಿಸಿವೆ.