alex Certify ಶೂರಿಟಿ ಇಲ್ಲದೆ ಸಾಲ,1 ವರ್ಷದ ನಂತರ ಮರುಪಾವತಿಗೆ ಅವಕಾಶ: MSME ಗಳಿಗೆ ಬಂಪರ್ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂರಿಟಿ ಇಲ್ಲದೆ ಸಾಲ,1 ವರ್ಷದ ನಂತರ ಮರುಪಾವತಿಗೆ ಅವಕಾಶ: MSME ಗಳಿಗೆ ಬಂಪರ್ ಗಿಫ್ಟ್

ನವದೆಹಲಿ: ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ.

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸುಲಭ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸುಮಾರು 48 ಲಕ್ಷ ಕಂಪನಿಗಳಿಗೆ ಇದರಿಂದ ಅನುಕೂಲವಾಗಲಿದೆ. ಯಾವುದೇ ಅಡಮಾನವಿಲ್ಲದೆ ಸಾಲ ಸೌಲಭ್ಯ ನೀಡಲಿದ್ದು, ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ.

12 ತಿಂಗಳು ಮರುಪಾವತಿಗೆ ವಿನಾಯಿತಿ ಇರುತ್ತದೆ. ಅಕ್ಟೋಬರ್ 31 ರವರೆಗೂ ಸಾಲ ಪಡೆಯಲು ಸಮಯದ ಮಿತಿ ನಿಗದಿಪಡಿಸಲಾಗಿದೆ. ಹೆಚ್ಚು ಸಂಸ್ಥೆಗಳಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ಬಂಡವಾಳದ ಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ. ಎಂಎಸ್ಎಂಇ ಗಳಿಗೆ ನೀಡಬೇಕಾದ ಬಾಕಿಯನ್ನು 45 ದಿನದೊಳಗೆ ಪಾವತಿಸಲಾಗುವುದು. ಸುಸ್ತಿ ಸಾಲವಿದ್ದರೂ ಹೊಸ ಸಾಲ ನೀಡಲು 20,000 ಕೋಟಿ ನಿಗದಿ ಮಾಡಲಾಗಿದೆ. ಕಂಪನಿ ವಿಸ್ತರಣೆಗೆ 50,000 ಕೋಟಿ ನಿಧಿ ಕಾಯ್ದಿರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...