alex Certify ಸ್ಟೇಟಸ್​ ಇಡೋದ್ರ ಮೂಲಕ ಬಳಕೆದಾರರಿಗೆ ಸ್ಪಷ್ಟನೆ ನೀಡಿದ ವಾಟ್ಸಾಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೇಟಸ್​ ಇಡೋದ್ರ ಮೂಲಕ ಬಳಕೆದಾರರಿಗೆ ಸ್ಪಷ್ಟನೆ ನೀಡಿದ ವಾಟ್ಸಾಪ್

ಫೇಸ್​ಬುಕ್​ ಸಂಸ್ಥೆಗೆ ಬಳಕೆದಾರರ ಮಾಹಿತಿ ಶೇರ್ ಮಾಡುತ್ತೇವೆ ಎಂಬ ಹೊಸ ಷರತ್ತು ಹಾಗೂ ನಿಯಮವನ್ನ ಹೇರಿದ್ದ ವಾಟ್ಸಾಪ್​ಗೆ ಇದೀಗ ಈ ಹೊಸ ನಿಯಮವೇ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಖಾಸಗಿ ವಿಚಾರಗಳು ಲೀಕ್​ ಆಗಬಹುದು ಎಂಬ ಗೊಂದಲದ ಹಿನ್ನೆಲೆ ಬಳಕೆದಾರರು ಸಿಗ್ನಲ್​ ಹಾಗೂ ಟೆಲಿಗ್ರಾಂನಂತಹ ಮೆಸೆಜಿಂಗ್​ ಅಪ್ಲಿಕೇಶನ್​ಗಳತ್ತ ಮುಖ ಮಾಡ್ತಿದ್ದಾರೆ. ಈಗಾಗಲೇ ತನ್ನ ಷರತ್ತು ಹಾಗೂ ನಿಯಮಗಳ ಬಗ್ಗೆ ಟ್ವಿಟರ್​​ನಲ್ಲಿ ಸ್ಪಷ್ಟನೆ ನೀಡಿದ್ದ ವಾಟ್ಸಾಪ್​​ ಇದೀಗ ಸ್ಟೇಟಸ್​ ಇಡೋದ್ರ ಮೂಲಕ ಮತ್ತೊಮ್ಮೆ ಬಳಕೆದಾರರ ಗೊಂದಲ ನಿವಾರಣೆ ಮಾಡುವ ಪ್ರಯತ್ನ ಮಾಡಿದೆ.

ಎಲ್ಲಾ ವಾಟ್ಸಾಪ್​ ಬಳಕೆದಾರರಿಗೆ ಈ ಸ್ಟೇಟಸ್​ ಗೋಚರವಾಗ್ತಿದೆ. ಇದರಲ್ಲಿ ವಾಟ್ಸಾಪ್​ ತನ್ನ ಹೊಸ ಷರತ್ತು ಹಾಗೂ ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿದೆ.  ನಿಮ್ಮ ಖಾಸಗಿತನಕ್ಕೆ ನಾವು ಬದ್ಧರಾಗಿದ್ದೇವೆ. ವಾಟ್ಸಾಪ್​ ನಿಮ್ಮ ವೈಯಕ್ತಿಕ ಸಂದೇಶಗಳನ್ನ ಹಾಗೂ ಆಡಿಯೋ ಸಂವಹನದ ಮೇಲೆ ಕಣ್ಣಿಡಲು ಸಾಧ್ಯವಿಲ್ಲ. ಬಳಕೆದಾರರು ಕಳಿಸುವ ಅಥವಾ ಸ್ವೀಕರಿಸುವ ಎಲ್ಲಾ ಮೆಸೇಜ್​ಗಳು ಎಂಡ್​ ಡು ಎಂಡ್​ ಎನ್​ಕ್ರಿಪ್ಟೆಡ್​ ಆಗಿರಲಿದೆ. ನೀವು ಶೇರ್ ಮಾಡಿರುವ ಲೋಕೆಷನ್​ಗಳನ್ನ ನಾವು ನೋಡಲು ಸಾಧ್ಯವಿಲ್ಲ. ನಿಮ್ಮ ಕಾಂಟ್ಯಾಕ್ಟ್​ನಲ್ಲಿರುವ ಮಾಹಿತಿಯನ್ನ ವಾಟ್ಸಾಪ್,​​ ಫೇಸ್​ಬುಕ್​​ಗೆ ಶೇರ್​ ಮಾಡೋದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ಹಿಂದೆ ಟ್ವಿಟರ್​​ನಲ್ಲೂ ಇದೇ ಮಾದರಿಯಲ್ಲಿ ವಾಟ್ಸಾಪ್​ ಸ್ಪಷ್ಟನೆ ನೀಡಿತ್ತು. ಸದಾ ಅಪ್ಲಿಕೇಶನ್​ ಅಪ್​ಡೇಟ್​ ಮಾಡಿದ್ರೆ ಮಾತ್ರ ವಾಟ್ಸಾಪ್​​ನ ಸುಧಾರಿತ ನಿಯಮ ಹಾಗೂ ಸೇವೆಗಳು ಬಳಕೆದಾರರಿಗೆ ಲಭ್ಯವಾಗ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನೋಟಿಸ್​ ರೀತಿಯಲ್ಲಿ ವಾಟ್ಸಾಪ್​​ ಸೇವಾ ನಿಯಮವನ್ನ ಬಳಕೆದಾರರಿಗೆ ವಾಟ್ಸಾಪ್​ ನೀಡಿತ್ತು. ಈ ಹೊಸ ನಿಯಮ ಒಪ್ಪದೇ ಹೋದಲ್ಲಿ ಫೆಬ್ರವರಿ 8ರಿಂದ ವಾಟ್ಸಾಪ್​ ಖಾತೆಯನ್ನ ನಿಷ್ಕ್ರಿಯ ಮಾಡೋದಾಗಿಯೂ ವಾಟ್ಸಾಪ್​ ಸೂಚನೆ ನೀಡಿತ್ತು. ವಾಟ್ಸಾಪ್​ನ ಈ ಹೊಸ ನಿಯಮ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಸಾಕಷ್ಟು ವಿರೋಧ ಎದುರಿಸಿದ ಬಳಿಕ ಮೇ 15ರವರೆಗೆ ಯಾವುದೇ ಬದಲಾವಣೆ ಮಾಡೋದಿಲ್ಲ ಎಂದೂ ವಾಟ್ಸಾಪ್​ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...