ಸ್ಟೇಟಸ್ ಇಡೋದ್ರ ಮೂಲಕ ಬಳಕೆದಾರರಿಗೆ ಸ್ಪಷ್ಟನೆ ನೀಡಿದ ವಾಟ್ಸಾಪ್ 17-01-2021 10:43AM IST / No Comments / Posted In: Business, Latest News ಫೇಸ್ಬುಕ್ ಸಂಸ್ಥೆಗೆ ಬಳಕೆದಾರರ ಮಾಹಿತಿ ಶೇರ್ ಮಾಡುತ್ತೇವೆ ಎಂಬ ಹೊಸ ಷರತ್ತು ಹಾಗೂ ನಿಯಮವನ್ನ ಹೇರಿದ್ದ ವಾಟ್ಸಾಪ್ಗೆ ಇದೀಗ ಈ ಹೊಸ ನಿಯಮವೇ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾಸಗಿ ವಿಚಾರಗಳು ಲೀಕ್ ಆಗಬಹುದು ಎಂಬ ಗೊಂದಲದ ಹಿನ್ನೆಲೆ ಬಳಕೆದಾರರು ಸಿಗ್ನಲ್ ಹಾಗೂ ಟೆಲಿಗ್ರಾಂನಂತಹ ಮೆಸೆಜಿಂಗ್ ಅಪ್ಲಿಕೇಶನ್ಗಳತ್ತ ಮುಖ ಮಾಡ್ತಿದ್ದಾರೆ. ಈಗಾಗಲೇ ತನ್ನ ಷರತ್ತು ಹಾಗೂ ನಿಯಮಗಳ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದ ವಾಟ್ಸಾಪ್ ಇದೀಗ ಸ್ಟೇಟಸ್ ಇಡೋದ್ರ ಮೂಲಕ ಮತ್ತೊಮ್ಮೆ ಬಳಕೆದಾರರ ಗೊಂದಲ ನಿವಾರಣೆ ಮಾಡುವ ಪ್ರಯತ್ನ ಮಾಡಿದೆ. ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಈ ಸ್ಟೇಟಸ್ ಗೋಚರವಾಗ್ತಿದೆ. ಇದರಲ್ಲಿ ವಾಟ್ಸಾಪ್ ತನ್ನ ಹೊಸ ಷರತ್ತು ಹಾಗೂ ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿದೆ. ನಿಮ್ಮ ಖಾಸಗಿತನಕ್ಕೆ ನಾವು ಬದ್ಧರಾಗಿದ್ದೇವೆ. ವಾಟ್ಸಾಪ್ ನಿಮ್ಮ ವೈಯಕ್ತಿಕ ಸಂದೇಶಗಳನ್ನ ಹಾಗೂ ಆಡಿಯೋ ಸಂವಹನದ ಮೇಲೆ ಕಣ್ಣಿಡಲು ಸಾಧ್ಯವಿಲ್ಲ. ಬಳಕೆದಾರರು ಕಳಿಸುವ ಅಥವಾ ಸ್ವೀಕರಿಸುವ ಎಲ್ಲಾ ಮೆಸೇಜ್ಗಳು ಎಂಡ್ ಡು ಎಂಡ್ ಎನ್ಕ್ರಿಪ್ಟೆಡ್ ಆಗಿರಲಿದೆ. ನೀವು ಶೇರ್ ಮಾಡಿರುವ ಲೋಕೆಷನ್ಗಳನ್ನ ನಾವು ನೋಡಲು ಸಾಧ್ಯವಿಲ್ಲ. ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಮಾಹಿತಿಯನ್ನ ವಾಟ್ಸಾಪ್, ಫೇಸ್ಬುಕ್ಗೆ ಶೇರ್ ಮಾಡೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಹಿಂದೆ ಟ್ವಿಟರ್ನಲ್ಲೂ ಇದೇ ಮಾದರಿಯಲ್ಲಿ ವಾಟ್ಸಾಪ್ ಸ್ಪಷ್ಟನೆ ನೀಡಿತ್ತು. ಸದಾ ಅಪ್ಲಿಕೇಶನ್ ಅಪ್ಡೇಟ್ ಮಾಡಿದ್ರೆ ಮಾತ್ರ ವಾಟ್ಸಾಪ್ನ ಸುಧಾರಿತ ನಿಯಮ ಹಾಗೂ ಸೇವೆಗಳು ಬಳಕೆದಾರರಿಗೆ ಲಭ್ಯವಾಗ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನೋಟಿಸ್ ರೀತಿಯಲ್ಲಿ ವಾಟ್ಸಾಪ್ ಸೇವಾ ನಿಯಮವನ್ನ ಬಳಕೆದಾರರಿಗೆ ವಾಟ್ಸಾಪ್ ನೀಡಿತ್ತು. ಈ ಹೊಸ ನಿಯಮ ಒಪ್ಪದೇ ಹೋದಲ್ಲಿ ಫೆಬ್ರವರಿ 8ರಿಂದ ವಾಟ್ಸಾಪ್ ಖಾತೆಯನ್ನ ನಿಷ್ಕ್ರಿಯ ಮಾಡೋದಾಗಿಯೂ ವಾಟ್ಸಾಪ್ ಸೂಚನೆ ನೀಡಿತ್ತು. ವಾಟ್ಸಾಪ್ನ ಈ ಹೊಸ ನಿಯಮ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಸಾಕಷ್ಟು ವಿರೋಧ ಎದುರಿಸಿದ ಬಳಿಕ ಮೇ 15ರವರೆಗೆ ಯಾವುದೇ ಬದಲಾವಣೆ ಮಾಡೋದಿಲ್ಲ ಎಂದೂ ವಾಟ್ಸಾಪ್ ಹೇಳಿದೆ.