ಹೊಸ ವರ್ಷದ ಮೊದಲ ತಿಂಗಳು ಮುಗಿಯುತ್ತ ಬಂದಿದೆ. ಎರಡನೇ ತಿಂಗಳ ಮೊದಲ ದಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಜೊತೆಗೆ ಕೆಲ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ನಿಮಗೆಲ್ಲ ಗೊತ್ತಿರುವಂತೆ ಫೆಬ್ರವರಿ ಮೊದಲ ದಿನ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಮಾಡುತ್ತವೆ. ಫೆಬ್ರವರಿ 1ರಂದೂ ಸಿಲಿಂಡರ್ ಬೆಲೆ ಬದಲಾಗಲಿದೆ. ಜನವರಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಿರಲಿಲ್ಲ. ಡಿಸೆಂಬರ್ ನಲ್ಲಿ ಎರಡು ಬಾರಿ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಫೆಬ್ರವರಿ ಒಂದರಿಂದ ಎಟಿಎಂ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ತರುತ್ತಿದೆ. ಎಟಿಎಂನಲ್ಲಾಗುವ ಮೋಸ ತಪ್ಪಿಸಲು ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಫೆಬ್ರವರಿ ಒಂದರಿಂದ ಇಎಂವಿ ಇಲ್ಲದ ಎಟಿಎಂ ಯಂತ್ರಗಳಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
ಏರ್ ಇಂಡಿಯಾ ಫೆಬ್ರವರಿಯಿಂದ ವಿದೇಶ ವಿಮಾನ ಹಾರಾಟ ಶುರು ಮಾಡ್ತಿದೆ. ದೇಶಿ ಹಾಗೂ ವಿದೇಶಿ ವಿಮಾನ ಹಾರಾಟದ ಪಟ್ಟಿಯನ್ನು ಏರ್ ಇಂಡಿಯಾ ಬಿಡುಗಡೆ ಮಾಡಿದೆ. ಫೆಬ್ರವರಿಯಿಂದ ಮಾರ್ಚ್ 27ರವರೆಗೆ ಏರ್ ಇಂಡಿಯಾದ ವಿಮಾನ ಪ್ರತಿ ದಿನ ಸಿಂಗಾಪುರಕ್ಕೆ ಹಾರಲಿದೆ.
ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದೆ. ಬಜೆಟ್ ನಲ್ಲಿ ಪೀಠೋಪಕರಣಗಳ ಕಚ್ಚಾ ವಸ್ತುಗಳು, ತಾಮ್ರ, ಕೆಲವು ರಾಸಾಯನಿಕಗಳು, ದೂರಸಂಪರ್ಕ ಉಪಕರಣಗಳು, ರಬ್ಬರ್ ಉತ್ಪನ್ನಗಳು, ನಯಗೊಳಿಸಿದ ವಜ್ರಗಳು, ರಬ್ಬರ್ ಸರಕುಗಳು, ಚರ್ಮದ ಬಟ್ಟೆಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ಕಡಿತಗೊಳಿಸುವ ಸಾಧ್ಯತೆಯಿದೆ. ಆಮದು ಸುಂಕವನ್ನು ಶೇಕಡಾ 20 ಕ್ಕಿಂತ ಹೆಚ್ಚು ಕಡಿಮೆ ಮಾಡುವ ಸಾಧ್ಯತೆಯಿದೆ.