ದೇಶದಾದ್ಯಂತ ಮತ್ತೆ ಲ್ಯಾಂಡ್ಲೈನ್, ಮೊಬೈಲ್ ಬಳಕೆ ನಿಯಮದಲ್ಲಿ ಬದಲಾವಣೆಯಾಗಿದೆ. ಲ್ಯಾಂಡ್ಲೈನ್ ಬಳಕೆದಾರರು ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೊದಲು ಜೀರೋವನ್ನು ಹಾಕಬೇಕಾಗುತ್ತದೆ. ಜನವರಿ 15ರಿಂದ ಅಂದ್ರೆ ಇಂದಿನಿಂದ ಈ ನಿಯಮ ಜಾರಿಗೆ ಬಂದಿದೆ.
ಟೆಲಿಕಾಂ ಆಪರೇಟರ್ಸ್ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿವೆ. ಏರ್ಟೆಲ್ ತನ್ನ ಲ್ಯಾಂಡ್ಲೈನ್ ಗ್ರಾಹಕರಿಗೆ ಈ ಬಗ್ಗೆ ಈಗಾಗಲೇ ಮಾಹಿತಿ ರವಾನೆ ಮಾಡಿದೆ. ಇದೇ ರೀತಿ ಜಿಯೋ ಕೂಡ ತನ್ನ ಲ್ಯಾಂಡ್ಲೈನ್ ಗ್ರಾಹಕರಿಗೆ ಎಸ್ಎಂಎಸ್ ಕಳುಹಿಸುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಮೊಬೈಲ್ ನಂಬರ್ ಮೊದಲು ಜೀರೋ ಹಾಕುವಂತೆ ಹೇಳಿದೆ.
ಲ್ಯಾಂಡ್ಲೈನ್ ನಿಂದ ಮೊಬೈಲ್ ಗೆ ಡಯಲ್ ಮಾಡುವಾಗ ಮಾತ್ರ ಜೀರೋವನ್ನು ಬಳಸಬೇಕು. ಆದ್ರೆ ಲ್ಯಾಂಡ್ಲೈನ್ ನಿಂದ ಲ್ಯಾಂಡ್ಲೈನ್ ಗೆ, ಮೊಬೈಲ್ ನಿಂದ ಲ್ಯಾಂಡ್ಲೈನ್ ಗೆ ಹಾಗೂ ಮೊಬೈಲ್ ನಿಂದ ಮೊಬೈಲ್ ಗೆ ಕರೆ ಮಾಡುವ ವೇಳೆ ಜೀರೋದ ಅವಶ್ಯಕತೆಯಿಲ್ಲ.