ಮುಂದಿನ ತಿಂಗಳಿನಿಂದ ಸಿಲಿಂಡರ್ ಡಿಲೆವರಿ ನಿಯಮದಲ್ಲಿ ಬದಲಾವಣೆಯಾಗಲಿದೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ.
ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ. ಸಿಲಿಂಡರ್ ಬುಕ್ ಆದ್ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಕೋಡ್ ತೋರಿಸಬೇಕು. ಈ ಕೋಡ್ ನಂತ್ರವೇ ಡೆಲಿವರಿ ಬಾಯ್ ಸಿಲಿಂಡರ್ ಮನೆಗೆ ನೀಡಲಿದ್ದಾನೆ.
ಮೊಬೈಲ್ ಸಂಖ್ಯೆ ನವೀಕರಿಸದ ಗ್ರಾಹಕರಿದ್ದರೆ, ಡೆಲಿವರಿ ಬಾಯ್ ಬಳಿ ಅಪ್ಲಿಕೇಷನ್ ಇರುತ್ತದೆ. ಅದ್ರಲ್ಲಿ ಅಪ್ಡೇಟ್ ಮಾಡುವ ಮೂಲಕ ಕೋಡ್ ಪಡೆಯಬೇಕಾಗುತ್ತದೆ. ವಿಳಾಸ ತಪ್ಪಾಗಿರುವ ಅಥವಾ ಮೊಬೈಲ್ ನಂಬರ್ ತಪ್ಪಾಗಿರುವ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಸದ್ಯ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ತರಲಿವೆ. ನಂತ್ರ ಬೇರೆ ನಗರಗಳಿಗೆ ಇದನ್ನು ವಿತರಿಸುವ ಪ್ಲಾನ್ ಇದೆ.