ಕಾರು, ದ್ವಿಚಕ್ರ ವಾಹನ ಪ್ರಿಯರಿಗೆ ಕೊರೊನಾ ಮಧ್ಯೆ ನೆಮ್ಮದಿ ಸುದ್ದಿಯೊಂದಿದೆ. ಆಗಸ್ಟ್ ನಿಂದ ಹೊಸ ಕಾರು ಅಥವಾ ದ್ವಿಚಕ್ರ ವಾಹನಗಳ ಖರೀದಿ ವೆಚ್ಛ ಸ್ವಲ್ಪ ಕಡಿಮೆಯಾಗಲಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಜೂನ್‌ನಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ದೀರ್ಘಾವಧಿಯ ವಾಹನ ವಿಮಾ ಪ್ಯಾಕೇಜ್ ಪಾಲಿಸಿಗಳನ್ನು ಖರೀದಿಸುವುದು ಕಡ್ಡಾಯವಲ್ಲ.
ಹೊಸ ನಿಯಮ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಹೊಸ ನಿಯಮ ಜಾರಿಗೆ ಬಂದ್ಮೇಲೆ ಕಾರು ಹಾಗೂ ದ್ವಿಚಕ್ರ ವಾಹನಗಳ ಆನ್ ರೋಡ್ ಬೆಲೆ ಇಳಿಕೆಯಾಗಲಿದೆ.
ಸದ್ಯ ಕಾರಿಗೆ ಮೂರು ವರ್ಷಗಳ ವಿಮಾ ಪ್ಯಾಕೇಜ್ ಹಾಗೂ ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳವರೆಗಿನ ಪಾಲಿಸಿ ಕಡ್ಡಾಯವಾಗಿದೆ. ಆಗಸ್ಟ್ 1 ರಿಂದ ಈ ನಿಯಮಗಳನ್ನು ತೆಗೆದು ಹಾಕಲಾಗುವುದು. ಗ್ರಾಹಕರು ಮೂರು ಅಥವಾ ಐದು ವರ್ಷಗಳ ದೀರ್ಘಾವಧಿಯ ವಿಮೆಯನ್ನು ಸಂಯೋಜಿತ ರೂಪದಲ್ಲಿ ಪಾವತಿಸಬೇಕಾಗಿಲ್ಲ.
ಮೂರು ಅಥವಾ ಐದು ವರ್ಷಗಳ ಕಡ್ಡಾಯ ವಿಮೆಯ ಬದಲಾಗಿ, ಗ್ರಾಹಕರು ಈಗ ಕಡ್ಡಾಯವಾಗಿ ಮೂರನೇ ವ್ಯಕ್ತಿಯ ಮೋಟಾರು ವಿಮೆಯನ್ನು ಖರೀದಿಸಬೇಕಾಗುತ್ತದೆ. ಮೂರನೇ ವ್ಯಕ್ತಿಯ ಕಾರು ವಿಮಾ ಪಾಲಿಸಿಯನ್ನು ಮೂರು ವರ್ಷಗಳವರೆಗೆ ಕಡ್ಡಾಯಗೊಳಿಸಲಾಗಿದೆ. ಹೊಸ ದ್ವಿಚಕ್ರ ವಾಹನ ಖರೀದಿದಾರರಿಗೆ ಐದು ವರ್ಷಗಳ ದ್ವಿಚಕ್ರ ವಾಹನ ವಿಮಾ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ.