alex Certify ’ಓಂ’ ಚಿತ್ರವಿದ್ದ ಡೋರ್‌ ಮ್ಯಾಟ್‌ ಮಾರಾಟ: ಅಮೆಜಾನ್ ವಿರುದ್ಧ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಓಂ’ ಚಿತ್ರವಿದ್ದ ಡೋರ್‌ ಮ್ಯಾಟ್‌ ಮಾರಾಟ: ಅಮೆಜಾನ್ ವಿರುದ್ಧ ನೆಟ್ಟಿಗರ ಆಕ್ರೋಶ

ಸಾಮುದಾಯಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರಬಲ್ಲ ಕೆಲಸ ಮಾಡುವ ಬ್ರಾಂಡ್‌ಗಳು, ಚಿತ್ರಗಳು, ಉತ್ಪನ್ನಗಳಿಗೆ ಬಹಿಷ್ಕಾರ ಹಾಕುವಂತೆ ಅಭಿಯಾನ ಹಮ್ಮಿಕೊಳ್ಳುವುದು ಈಗಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಕಾಮನ್ ಆಗಿ ಹೋಗಿದೆ.

ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಹಿಂದೂ ಧಾರ್ಮಿಕ ಸಂಕೇತವಾದ ’ಓಂ’ ಇರುವ ಡೋರ್ ‌ಮ್ಯಾಟ್‌ಗಳನ್ನು ಮಾರಾಟ ಮಾಡುತ್ತಿದ್ದ ವಿಚಾರ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. ಇದರ ವಿರುದ್ಧ ಪ್ರತಿಕ್ರಿಯಿಸಿರುವ ನೆಟ್ಟಿಗರು #BoycottAmazon ಅಭಿಯಾನಕ್ಕೆ ಕರೆ ಕೊಟ್ಟಿದ್ದು ಟ್ವಿಟರ್‌ನಲ್ಲಿ ಮಂಗಳವಾರ ಇದೇ ವಿಚಾರ ಟ್ರೆಂಡ್ ಆಗುತ್ತಿತ್ತು.

ಅಮೆರಿಕದ ರೀಟೇಲರ್‌ ಒಂದು ಹೀಗೆ ಮಾಡಿದ್ದು, ಈ ಉತ್ಪನ್ನಗಳು ಅಮೆಜಾನ್‌ನ ಭಾರತದ ಜಾಲತಾಣದಲ್ಲಿ ಕಂಡುಬಂದಿಲ್ಲ. ಅಮೆಜಾನ್‌ನ ಅಮೆರಿಕದ ಜಾಲತಾಣದಲ್ಲಿ ಈ ಮ್ಯಾಟ್‌ಗಳ ಆಯ್ಕೆ ಕಂಡುಬಂದಿರುವ ವಿಚಾರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪೆಟ್ಟು ಕೊಟ್ಟಂತೆ ಆಗಿದೆ ಎಂಬುದು ನೆಟ್ಟಿಗರ ಆಪಾದನೆಯಾಗಿದೆ.

ಈ ಉತ್ಪನ್ನದ ಸ್ಕ್ರೀನ್‌ಶಾಟ್‌ ಫೇಸ್ಬುಕ್ ಹಾಗೂ ಟ್ವಿಟರ್‌ಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...