![Netflix is Offering 83 Years of Free Subscription if You Can Win ...](https://images.news18.com/ibnlive/uploads/2020/07/1595056423_untitled-design-2020-07-18t124139.957.png)
ನೆಟ್ ಫ್ಲಿಕ್ಸ್ ಉಚಿತ ಚಂದಾದಾರಿಕೆ ಬೇಕೆ? ಹಾಗಿದ್ದರೆ ವಿಡಿಯೋ ಗೇಮ್ ನಲ್ಲಿ ಗೆದ್ದು ತೋರಿಸಿ ಬರೋಬ್ಬರಿ ಒಂದು ಸಾವಿರ ತಿಂಗಳ ಉಚಿತ ಚಂದಾದಾರಿಕೆ ಗಳಿಸಿ. ಇಂತದ್ದೊಂದು ಆಫರ್ ಅನ್ನು ನೆಟ್ ಫ್ಲಿಕ್ಸ್ ನೀಡಿದೆ.
ಅಮೇರಿಕನ್ ಸೂಪರ್ ಹೀರೋ ಚಾರ್ಲಿಜ್ ಥರಾನ್ ಅಭಿನಯದ ‘ದಿ ಓಲ್ಡ್ ಗಾರ್ಡ್’ ಬಿಡುಗಡೆ ಸಂಭ್ರಮದಲ್ಲಿರುವ ನೆಟ್ ಫ್ಲಿಕ್ಸ್, ಅದೇ ಹೆಸರಿನ ವಿಡಿಯೊ ಗೇಮ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಒಂದು ವೇಳೆ ವಿಡಿಯೋ ಗೇಮ್ ನಲ್ಲಿ ಗೆದ್ದರೆ 83 ವರ್ಷಗಳ (1000 ತಿಂಗಳು) ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ.
ದಿ ಓಲ್ಡ್ ಗಾರ್ಡ್ ಬಿಡುಗಡೆಯ ನಂತರ, ನೆಟ್ ಫ್ಲಿಕ್ಸ್ ಬ್ರೌಸರ್ ಆಧಾರಿತ ವಿಡಿಯೋ ಗೇಮ್ ಅನ್ನು ಪರಿಚಯಿಸಿತು, ಇದನ್ನು ಶುಕ್ರವಾರದಿಂದ ಭಾನುವಾರದವರೆಗೆ ಪ್ರಾರಂಭಿಸಬಹುದು.
ಮೂರು ದಿನಗಳ ಟೈಮರ್ ನಂತರ ಹೆಚ್ಚಿನ ಅಂಕಗಳೊಂದಿಗೆ ಕೊನೆಗೊಂಡರೆ, ಜೀವಿತಾವಧಿಯ ನೆಟ್ಫ್ಲಿಕ್ಸ್ ಚಂದಾದಾರಿಕೆ ಪಡೆಯಬಹುದು.
“ಸ್ಪರ್ಧೆಯು www.oldguardgame.com ನಲ್ಲಿ ಮೂರು ದಿನಗಳವರೆಗೆ (7/17, 7/18, ಮತ್ತು 7/19) ನಡೆಯಲಿದೆ.