ನೆಟ್ ಫ್ಲಿಕ್ಸ್ ವಿಶ್ವದ ಜನಪ್ರಿಯ ಒಟಿಟಿ ಫ್ಲಾಟ್ ಫಾರಂ ಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ ಇದಕ್ಕೆ ಚಂದಾದಾರರಾಗಿರುವವರಷ್ಟೇ ಸಂಖ್ಯೆಯಲ್ಲಿ ಅವರುಗಳ ಪಾಸ್ವರ್ಡ್ ಬಳಸಿ ಅನಧಿಕೃತವಾಗಿ ವೀಕ್ಷಣೆ ಮಾಡುವವರಿದ್ದಾರೆ.
ತಮ್ಮ ಸ್ನೇಹಿತರು, ಬಂಧುಗಳ ಪಾಸ್ವರ್ಡ್ ಬಳಸಿಕೊಂಡು ನೆಟ್ ಫ್ಲಿಕ್ಸ್ ವೀಕ್ಷಣೆ ಮಾಡಲಾಗುತ್ತಿದ್ದು, ಈಗ ಅಂತವರಿಗೆ ಕಡಿವಾಣ ಹಾಕಲು ಸಂಸ್ಥೆ ಮುಂದಾಗಿದೆ. ಭಾರತದಲ್ಲಿ ಬಹಳಷ್ಟು ಮಂದಿ ಇಂತಹ ವೀಕ್ಷಕರಿದ್ದಾರೆ ಎನ್ನಲಾಗಿದೆ.
ಗಮನಿಸಿ…! ಆಧಾರ್ –ಪಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31 ಕೊನೆ ದಿನ – ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ
ಇನ್ನು ಮುಂದೆ ಮತ್ತೊಬ್ಬರ ಪಾಸ್ವರ್ಡ್ ಪಡೆದು ಲಾಗಿನ್ ಆಗಲು ಯತ್ನಿಸಿದರೆ ಸಂಪರ್ಕ ಕಡಿತಗೊಳ್ಳಲಿದೆ ಎನ್ನಲಾಗಿದ್ದು, ಈ ಕುರಿತ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಒಂದು ವೇಳೆ ಇದು ಸಫಲವಾದರೆ ಚಂದಾದಾರಿಕೆ ಮಾಡಿಸಿಕೊಳ್ಳದೆ ಅನಧಿಕೃತವಾಗಿ ನೆಟ್ ಫ್ಲಿಕ್ಸ್ ವೀಕ್ಷಣೆ ಮಾಡಲು ಕಡಿವಾಣ ಬೀಳಲಿದೆ.