alex Certify ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿರುವವರಿಗೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿರುವವರಿಗೊಂದು ಗುಡ್‌ ನ್ಯೂಸ್

NVS Teacher Recruitment 2020: नवोदय विद्यालय में आर्ट टीचर और लाइब्रेरियन सहित इन पदों पर निकली भर्ती, अप्लाई @navodaya.gov.in

ನವೋದಯ ವಿದ್ಯಾಲಯ ಸಮಿತಿಯಲ್ಲಿ ಶಿಕ್ಷಕರ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಶಿಕ್ಷಕ, ಕಲಾ ಶಿಕ್ಷಕ, ಪಿಇಟಿ (ಪುರುಷ), ಪಿಇಟಿ (ಮಹಿಳಾ) ಮತ್ತು ಗ್ರಂಥಪಾಲಕ ಹಾಗೂ ಸ್ಟಾಪ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೋದಯ ವೆಬ್ಸೈಟ್ ನಲ್ಲಿ ಹುದ್ದೆಗೆ ಅರ್ಜಿ ಅಲ್ಲಿಸಬಹುದು.

www.navodaya.gov.in ವೆಬ್ ಸೈಟ್ ನಲ್ಲಿ ಹುದ್ದೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಿದೆ. ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆಯ ಪ್ರಕಾರ, ಈ ನೇಮಕಾತಿಯನ್ನು ಒಪ್ಪಂದದ ಮೇರೆಗೆ ಮಾಡಲಾಗುತ್ತಿದೆ. ಉತ್ತಮ ಕೆಲಸ ಮಾಡುವ ಅಭ್ಯರ್ಥಿಗಳ ಅಧಿಕಾರಾವಧಿಯನ್ನು ಹೆಚ್ಚಿಸಲಾಗುವುದು. ಗೋವಾ, ಗುಜರಾತ್, ಮಹಾರಾಷ್ಟ್ರ, ದಮನ್ ಡಿಯು, ದಾದರ್ ಮತ್ತು ನಗರ್ ಹವೇಲಿಯಲ್ಲಿ ಸಂಗೀತ ಶಿಕ್ಷಕ, ಕಲಾ ಶಿಕ್ಷಕ, ಪಿಇಟಿ, ಗ್ರಂಥಪಾಲಕ ಮತ್ತು ಸ್ಟಾಪ್ ನರ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಅಕ್ಟೋಬರ್ 31. ವೆಬ್ಸೈಟ್ ನಲ್ಲಿ ಅರ್ಜಿ ಡೌನ್ಲೋಡ್ ಮಾಡಿ ನಂತ್ರ ಭರ್ತಿ ಮಾಡಬೇಕು. 13 ಸಂಗೀತ ಶಿಕ್ಷಕ, 17 ಕಲಾ ಶಿಕ್ಷಕ, 20 ಪಿಇಟಿ (ಪುರುಷ), 13 ಪಿಇಟಿ (ಸ್ತ್ರೀ), 12 ಗ್ರಂಥಪಾಲಕ,21 ಸ್ಟಾಫ್ ನರ್ಸ್ ಹುದ್ದೆಗಳ ನೇಮಕ ನಡೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...