alex Certify BIG NEWS: ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ..!

ರಿಲಯನ್ಸ್ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕೋಟ್ಯಾಧಿಪತಿ​​​ ಮುಖೇಶ್​ ಅಂಬಾನಿಯನ್ನ ಚೀನಾದ ಪ್ರತಿಷ್ಠಿತ ​ ವಾಟರ್​ ಕಂಪನಿ ಮಾಲೀಕ ಜೊಂಗ್​ ಶನ್​ಶಾನ್​ ಹಿಂದಿಕ್ಕಿದ್ದಾರೆ.

ಈ ವರ್ಷ ಲೋನ್ ವೂಲ್ಫ್​ ಖ್ಯಾತಿಯ ಶನ್​ಶಾನ್​ ಆಸ್ತಿಯ ನಿವ್ವಳ ಮೌಲ್ಯವು 70.9 ಶತಕೋಟಿ ಮೌಲ್ಯದಿಂದ 77.8 ಶತಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ಶನ್​ಶಾನ್​ ಇಡೀ ವಿಶ್ವದಲ್ಲಿ 11ನೇ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನೂ ಅಲಂಕರಿಸಿದ್ದಾರೆ. ಅಲ್ಲದೆ ಇವರ ಆಸ್ತಿ ಗಳಿಕೆ ಇತಿಹಾಸದಲ್ಲೇ ಅತ್ಯಂತ ವೇಗವಾದ ಸಂಪತ್ತು ಕ್ರೋಢೀಕರಣಗಳಲ್ಲಿ ಒಂದಾಗಿದೆ.

66 ವರ್ಷದ ಶನ್​ಶಾನ್​ ತನ್ನ ಸ್ವಂತ ಉದ್ಯಮ ಆರಂಭಿಸುವ ಮೊದಲು ಪತ್ರಿಕೆ ವರದಿಗಾರ, ಔಷಧ ತಯಾರಕ ಹಾಗೂ ಪಾನೀಯ ಮಾರಾಟದ ಏಜೆಂಟ್​ ಆಗಿ ಕೆಲಸ ಮಾಡಿದ್ದರು. ಶನ್​ಶಾನ್​ ಮಾಲೀಕತ್ವದ ​ ವಾಟರ್​ ಬಾಟಲ್​ ಚೀನಾದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಕಂಪನಿಯು ಚಹಾ, ಜ್ಯೂಸ್​ ಹಾಗೂ ರುಚಿ ರುಚಿಯಾದ ವಿಟಮಿನ್​ ಪಾನೀಯಗಳನ್ನೂ ಮಾರಾಟ ಮಾಡುತ್ತೆ. ಬ್ಲೂಮ್​ ಬರ್ಗ್ ಸೂಚ್ಯಂಕ ನೀಡಿರುವ ವರದಿ ಪ್ರಕಾರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಪತ್ತು ಹೆಚ್ಚಳ ಮಾಡಿಕೊಂಡ ಮೊದಲ ವ್ಯಕ್ತಿ ಶನ್​ಶಾನ್​ ಎಂದು ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...