
ಮೊಟೊರೊಲಾ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಮೋಟೋ ಇ 7 ಪ್ಲಸ್ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್ ಬೆಲೆಯನ್ನು 9,499 ರೂಪಾಯಿಗೆ ನಿಗದಿಪಡಿಸಿದೆ. ಸೆಪ್ಟೆಂಬರ್ 30 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ನಡೆಯಲಿದೆ. ಗ್ರಾಹಕರು ಮಿಸ್ಟಿ ಬ್ಲೂ ಮತ್ತು ಟ್ವಿಲೈಟ್ ಆರೆಂಜ್ ಕಲರ್ ನಲ್ಲಿ ಖರೀದಿ ಮಾಡಬಹುದು. ಫೋನ್‌ನ ಅತ್ಯಂತ ವಿಶೇಷವೆಂದರೆ ಅದರ 5000ಎಂಎಎಚ್ ಬ್ಯಾಟರಿ.
ಫೋನ್ 6.5-ಇಂಚಿನ ಮ್ಯಾಕ್ಸ್ ವಿಷನ್ ಎಚ್ಡಿ + ಡಿಸ್ಪ್ಲೇ ಹೊಂದಿದೆ. ಫೋನ್‌ನಲ್ಲಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ನೀಡಲಾಗಿದೆ. ಮೊಟೊರೊಲಾದ ಈ ಫೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಮೊಟೊರೊಲಾ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಹೊಂದಿದ್ದು, ಫೋನ್ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಮೋಟೋ ಇ 7 ಪ್ಲಸ್ 5000 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದೆ.