ಮಾರಾಟದ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಕ್ಕಿಂತ ವ್ಯತ್ಯಯವಾಗಿ ಆಯವ್ಯಯಗಳು ಕಂಡು ಬಂದಲ್ಲಿ ವ್ಯಾಪರಸ್ಥರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕೇಂದ್ರ ನೇರ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) ಈ ಸಂಬಂಧ ಮಾರ್ಗಸೂಚಿಗಳನ್ನು (ಎಸ್‌ಓಪಿ) ಹೊರಡಿಸಿದ್ದು, ಜಿಎಸ್‌ಟಿ ಕಾನೂನುಗಳ ಉಲ್ಲಂಘನೆ ಮಾಡಿದವರಿಗೆ ವ್ಯಾಪಾರದ ನೋಂದಣಿಯನ್ನೇ ರದ್ದು ಮಾಡುವ ಸಾಧ್ಯತೆಯನ್ನು ತೆರೆಯಲಾಗಿದೆ. ಕಂದಾಯ ಇಲಾಖೆಯ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕಳೆದ ಡಿಸೆಂಬರ್‌ನಲ್ಲಿ ಈ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿತ್ತು.
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ 50 ರೂ. ಏರಿಕೆ
ಸತತ ನಾಲ್ಕು ತಿಂಗಳುಗಳ ಮಟ್ಟಿಗೆ ಲಕ್ಷ ಕೋಟಿ ರೂ.ಗಳನ್ನು ದಾಟಿರುವ ಜಿಎಸ್‌ಟಿ ಸಂಗ್ರಹವು ಜನವರಿಯಲ್ಲಿ 1.2 ಲಕ್ಷ ಕೋಟಿ ರೂಗಳ ಗಡಿ ದಾಟಿತ್ತು.
ನಕಲಿ ಬಿಲ್‌ಗಳನ್ನು ಇಟ್ಟುಕೊಂಡು ಜಿಎಸ್‌ಟಿ ವಂಚನೆ ಮಾಡುವವರ ವಿರುದ್ಧ ಸರ್ಕಾರ ಸಮರ ಸಾರಿದ್ದು, ನವೆಂಬರ್‌ನಿಂದ ಇದುವರೆಗೂ 8000 ಉದ್ಯಮಗಳ ಮೇಲೆ 2500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಸಂಬಂಧ ಎಂಟು ಚಾರ್ಟಡ್ ಅಕೌಂಟೆಂಟ್‌ಗಳು ಸೇರಿದಂತೆ 258 ಮಂದಿಯನ್ನು ಬಂಧಿಸಲಾಗಿದೆ.