ಶಿವಮೊಗ್ಗ: ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಮತ್ತೊಂದು ಕೊಡುಗೆ ನೀಡಲಾಗಿದೆ. ಮಾರ್ಚ್ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.25 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಪರಿಷ್ಕೃತ ದರ ಮಾರ್ಚ್ 1 ರಿಂದ ಅನ್ವಯವಾಗಲಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ವರ್ಷದ ಆರಂಭದಲ್ಲಿ ಪ್ರತಿ ಲೀಟರ್ ಗೆ 2.75 ರೂಪಾಯಿ ನೀಡಲಾಗಿತ್ತು. ಈಗ ಮತ್ತೆ ಹಾಲಿನ ಖರೀದಿ ದರವನ್ನು ಏರಿಕೆ ಮಾಡಲಾಗಿದ್ದು, ಹಾಲು ಉತ್ಪಾದಕರಿಗೆ ಸಂತಸ ತಂದಿದೆ. ಮಾರ್ಚ್ 1 ರಿಂದ ಹಾಲು ಉತ್ಪಾದಕರಿಗೆ 2.25 ರೂಪಾಯಿ ಹೆಚ್ಚುವರಿ ದರ ಸಿಗಲಿದೆ. ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎನ್ನಲಾಗಿದೆ.