ಬೆಂಗಳೂರು: ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ, ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಮನವಿ ಮಾಡುತ್ತಿದ್ದರೂ, ಕ್ರಮ ಕೈಗೊಂಡಿಲ್ಲ.
ಪ್ರತಿ ಬಾರಿ ಸರ್ಕಾರದ ಅನುಮತಿ ಪಡೆದು ದರ ಏರಿಕೆ ಮಾಡುತ್ತಿದ್ದ ಕೆಎಂಎಫ್ ಈಗ ತನಗಿರುವ ಅಧಿಕಾರ ಬಳಸಿಕೊಂಡು ದರ ಏರಿಕೆಗೆ ತೀರ್ಮಾನಿಸಿದೆ. ಇದಕ್ಕೆ ಎಲ್ಲಾ 14 ಒಕ್ಕೂಟಗಳು ಇದಕ್ಕೆ ಬೆಂಬಲ ನೀಡಿವೆ. ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲಿದ್ದು, ಇದನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗಿದೆ.