ಬೆಂಗಳೂರು: ನಾಳೆಯಿಂದ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ, ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇಕಡ 5 ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಿರುವುದರಿಂದ ನಾಳೆಯಿಂದ ಒಂದರಿಂದ ಮೂರು ರೂಪಾಯಿವರೆಗೆ ಬೆಲೆ ಏರಿಕೆಯಾಗಲಿದೆ.
ನಾಳೆಯಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾಳೆಯಿಂದ ಹೊಸ ದರದಲ್ಲಿ ಮೊಸರು, ಮಜ್ಜಿಗೆ, ಲಸ್ಸಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.