alex Certify ಕೊನೆಗೂ ಮುಗಿದ ವರ್ಕ್ ಫ್ರಮ್​ ಹೋಂ: ವಾಪಸ್​ ಕಚೇರಿಗೆ ಹಾಜರಾಗಿ ಎಂದ ಮೈಕ್ರೋಸಾಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಮುಗಿದ ವರ್ಕ್ ಫ್ರಮ್​ ಹೋಂ: ವಾಪಸ್​ ಕಚೇರಿಗೆ ಹಾಜರಾಗಿ ಎಂದ ಮೈಕ್ರೋಸಾಫ್ಟ್

ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಹೋಗಿತ್ತು. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್​ ಫ್ರಮ್ ಹೋಂ ಮಾಡುವಂತೆ ಆದೇಶವನ್ನ ನೀಡಿದ್ದವು. ಇದೀಗ ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ತ್ವರಿತಗತಿಯಲ್ಲಿ ಸಾಗುತ್ತಿದೆ. ಸಹಜವಾಗಿ ಕೊರೊನಾ ಜೊತೆಯೇ ಬದುಕೋಕೆ ಜನರು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿ ಮೈಕ್ರೋಸಾಫ್ಟ್​ ಕೂಡ ಮೊದಲಿನಂತೆಯೇ ಕೆಲಸ ಮಾಡಲು ನಿರ್ಧರಿಸಿದೆ.‌

ಮೈಕ್ರೋಸಾಫ್ಟ್ ಕಂಪನಿಯ ಎಕ್ಸಿಕ್ಯುಟಿವ್​ ವೈಸ್​ ಪ್ರೆಸಿಡೆಂಟ್​ ಕರ್ಟ್ ಡೆಲ್ಬೀನ್, ಕಂಪನಿಯ ಸಿಬ್ಬಂದಿಗೆ ವಾಪಸ್​ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ವಾಷಿಂಗ್ಟನ್​ ಮತ್ತು ಹತ್ತಿರದ ಕ್ಯಾಂಪಸ್​ಗಳಲ್ಲಿರುವ ತನ್ನ ಪ್ರಧಾನ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವಾಪಸ್​ ಕಚೇರಿಗೆ ಹಾಜರಾಗುವಂತೆ ಹೇಳಲಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯಿಂದ ಮಾಹಿತಿಯನ್ನ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರೋದಾಗಿ ಕರ್ಟ್​ ಡೆಲ್ಬೀನ್​ ಹೇಳಿದ್ದಾರೆ.

ಅಲ್ಲದೇ ಕಚೇರಿಗೆ ಹಾಜರಾಗುವ ಸಿಬ್ಬಂದಿಯ ಆರೋಗ್ಯದ ಕಡೆಯೂ ಗಮನ ಇರಿಸಿರುವ ಮೈಕ್ರೋಸಾಫ್ಟ್ ಕಂಪನಿ, ಉದ್ಯೋಗಿಗಳ ನಡುವೆ ಸಾಮಾಜಿಕ ಅಂತರ ಕಾಪಾಡುವ ವ್ಯವಸ್ಥೆ ಮಾಡೋದ್ರ ಜೊತೆಗೆ ಫೇಸ್​ ಮಾಸ್ಕ್​ಗಳನ್ನ ಹಾಗೂ ಆರೋಗ್ಯ ಸಂಬಂಧಿ ಎಲ್ಲಾ ಮುನ್ನಚ್ಚರಿಕೆಗಳನ್ನ ಕೈಗೊಳ್ಳುವ ಭರವಸೆ ನೀಡಿದೆ. ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಮಾರ್ಚ್ 29ರಿಂದ ಸಿಬ್ಬಂದಿಗೆ ಕಚೇರಿಗೆ ವಾಪಸ್ಸಾಗುವಂತೆ ಹೇಳಲಾಗಿದೆ. ಪ್ರಸ್ತುತ ಮೈಕ್ರೋಸಾಫ್ಟ್​ ಕಂಪನಿ 21 ದೇಶಗಳಲ್ಲಿ ತನ್ನ ಕಂಪನಿಯನ್ನ ಹೊಂದಿದ್ದು ಒಟ್ಟು 1.6 ಲಕ್ಷ ಸಿಬ್ಬಂದಿಗೆ ಕೆಲಸ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...