alex Certify BIG NEWS: ಸೈಬರ್ ವಂಚನೆ ಆರ್ಥಿಕ ನಷ್ಟ ತಡೆಗೆ ಮೋದಿ ಸರ್ಕಾರದಿಂದ ಮಹತ್ವದ ಕ್ರಮ, ಸಹಾಯವಾಣಿ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೈಬರ್ ವಂಚನೆ ಆರ್ಥಿಕ ನಷ್ಟ ತಡೆಗೆ ಮೋದಿ ಸರ್ಕಾರದಿಂದ ಮಹತ್ವದ ಕ್ರಮ, ಸಹಾಯವಾಣಿ ಆರಂಭ

ನವದೆಹಲಿ: ಸೈಬರ್ ವಂಚನೆಯಿಂದಾಗುವ ಆರ್ಥಿಕ ನಷ್ಟ ತಡೆಗೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಸಹಾಯವಾಣಿ 155260 ಆರಂಭಿಸಿದೆ.

ಸೈಬರ್ ವಂಚನೆ ಪ್ರಕರಣಗಳಲ್ಲಿ ಅನೇಕರು ಮೋಸ ಹೋಗಿ ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಳ್ಳುವುದನ್ನು ತಡೆಗಟ್ಟಲು, ಇಂತಹ ಪ್ರಕರಣಗಳನ್ನು ವರದಿ ಮಾಡಲು ರಾಷ್ಟ್ರೀಯ ಸಹಾಯವಾಣಿ ಮತ್ತು ವರದಿ ಮಾಡುವ ವೇದಿಕೆ ಕಲ್ಪಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಸುರಕ್ಷಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಬಲಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ರಾಷ್ಟ್ರೀಯ ಸಹಾಯವಾಣಿ 155260 ಕಾರ್ಯರೂಪಕ್ಕೆ ತಂದಿದೆ.

ಸಹಾಯವಾಣಿಯನ್ನು ಏಪ್ರಿಲ್ 1, 2021 ರಂದು ಪ್ರಾರಂಭಿಸಲಾಯಿತು. ಸಹಾಯವಾಣಿ 155260 ಮತ್ತು ಅದರ ವರದಿ ಮಾಡುವ ವೇದಿಕೆಯನ್ನು ಗೃಹ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಕಾರ್ಯಗತಗೊಳಿಸಿದೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಕಾರದೊಂದಿಗೆ ಎಲ್ಲಾ ಪ್ರಮುಖ ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ಆನ್‌ಲೈನ್ ವ್ಯವಹಾರದ ವಂಚನೆ ತಡೆಗೆ ಕ್ರಮಕೈಗೊಳ್ಳಲಾಗಿದೆ.

ಪ್ರಸ್ತುತ 155260 ಸಹಾಯವಾಣಿ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗ್ತಿದೆ. (ಛತ್ತೀಸ್‌ಗಢ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ) ದೇಶದ ಜನಸಂಖ್ಯೆಯ ಶೇಕಡ 35 ಕ್ಕಿಂತ ಹೆಚ್ಚು ಜನರು ಬಳಸಿಕೊಳ್ಳುತ್ತಿದ್ದಾರೆ. ಮೋಸಗಾರರಿಂದ ಹಣದ ಹರಿವನ್ನು ತಡೆಗಟ್ಟಲು ಇತರ ರಾಜ್ಯಗಳಲ್ಲಿ ರೋಲ್ ಔಟ್ ನಡೆಯುತ್ತಿದೆ.

ಎರಡು ತಿಂಗಳ ಅಲ್ಪಾವಧಿಯಲ್ಲಿ 155260 ಸಹಾಯವಾಣಿ ಮೂಲಕ ವಂಚಕರ ಕೈಗೆ ತಲುಪದಂತೆ 1.85 ಕೋಟಿ ರೂ.ಗಿಂತಲೂ ಹೆಚ್ಚು ಹಣ ಉಳಿಸಲು ಸಾಧ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...