ಪೆಟ್ರೋಲ್ – ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರೋದ್ರಿಂದ ಭಾರತದಲ್ಲಿ ಕ್ರಮೇಣವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ.
ಗ್ರಾಹಕರ ಈ ಆಸಕ್ತಿಯನ್ನ ಗಮನದಲ್ಲಿ ಇಟ್ಟುಕೊಂಡು ಎಂಜಿ ಮೋಟಾರ್ಸ್ ಅಪ್ಗ್ರೇಡೆಡ್ ಮಿಡ್ ಸೈಜ್ ಎಸ್ಯುವಿ ಎಂಜಿ ಜೆಡ್ಎಸ್ಇವಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡೋದಾಗಿ ಹೇಳಿದೆ.
ಫೆಬ್ರವರಿ 8ನೇ ತಾರೀಖಿನಂದು ಎಂಜಿ ಮೋಟಾರ್ಸ್ ಈ ಕಾರನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.
ಕಂಪನಿಯು ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಆದರೆ MG ZS EV ಕಾರಿನ ಇಂಟೀರಿಯರ್ ಹಾಗೂ ಎಕ್ಸ್ಟಿರೀಯರ್ ಫೀಚರ್ಸ್ನಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಲಾಗ್ತಿದೆ. ಕಂಪನಿಯು ಈ ಕಾರು ಒಂದು ಬಾರಿ ಚಾರ್ಜ್ ಮಾಡಿದ್ರೆ 340 ಕಿಲೋಮೀಟರ್ವರೆಗೆ ಚಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಇದಕ್ಕೂ ಮೊದಲು ಎಂಜಿ ಮೋಟಾರ್ಸ್ ದೇಶದ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್ಯುವಿ MG ZS ಲಾಂಚ್ ಮಾಡಿದೆ. ಸ್ವಲ್ಪ ಸಮಯದ ಹಿಂದೆ ಕಂಪನಿಯ ಅಧ್ಯಕ್ಷ ಹಾಗೂ ಮುಖ್ಯ ನಿರ್ದೇಶಕ ರಾಜೀವ್ ಛಾಬಾ, ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಭಾರತದಲ್ಲೇ ತಯಾರು ಮಾಡಲಾಗಿದೆ. ಇದರಿಂದ ಕಾರಿನ ದರವೂ ಕಡಿಮೆ ಇರಲಿದೆ ಎಂದು ಹೇಳಿದ್ರು.