ದೇಶದ ಬಹುದೊಡ್ಡ ಕಾರು ತಯಾರಕ ಕಂಪನಿಗಳಲ್ಲೊಂದಾದ ಮಾರುತಿ ಸುಜುಕಿ ತನ್ನ ಕಂಪನಿಯ ಕಾರುಗಳ ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದೆ. ನೀವು ಮಾರುತಿ ಸುಜುಕಿ ಕಂಪನಿಯ ಕಾರನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದರೆ ಈ ತಿಂಗಳಲ್ಲೇ ಖರೀದಿ ಮಾಡಿ.
ಯಾಕಂದ್ರೆ ಈ ತಿಂಗಳಲ್ಲಿ ಮಾರುತಿ ಸುಜುಕಿ ಮಾರುತಿ ಆಲ್ಟೋ, ಬ್ರೆಜಾ ಎಸ್ಯುವಿ ಡಿಸ್ಕೌಂಟ್ ನೀಡಿದೆ. ಈ ಬಗ್ಗೆ ವಿವರಣೆ ಇಲ್ಲಿದೆ ನೋಡಿ.
ಮಾರುತಿ ಆಲ್ಟೋ : ಈ ತಿಂಗಳಲ್ಲಿ ನೀವು ಮಾರುತಿ ಆಲ್ಟೋ ಕಾರನ್ನ ಖರೀದಿ ಮಾಡಿದ್ರೆ ಸರಿ ಸುಮಾರು 39 ಸಾವಿರ ರೂಪಾಯಿವರೆಗೆ ಉಳಿತಾಯ ಮಾಡಬಹುದಾಗಿದೆ. 20 ಸಾವಿರ ರೂಪಾಯಿ ಕನ್ಸೂಮರ್ ಆಫರ್, 15 ಸಾವಿರ ರೂಪಾಯಿ ಎಕ್ಸ್ಚೇಂಜ್ ಬೋನಸ್ ಹಾಗೂ 4 ಸಾವಿರ ರೂಪಾಯಿ ಕಾರ್ಫೋರೇಟ್ ಬೋನಸ್ ಇದರಲ್ಲಿ ಸೇರಿದೆ. ಆಲ್ಟೋ ಕಾರಿನಲ್ಲಿ 796 ಸಿಸಿ ಇಂಜಿನ್ ಇದ್ದು ಈ ಕಾರು ಪ್ರತಿ ಲೀಟರ್ಗೆ 22 ಕಿಮೀ ಮೈಲೇಜ್ ನೀಡುತ್ತೆ.
ಮಾರುತಿ ಎಸ್ – ಪ್ರೆಸ್ಸೊ : ಮಾರುತಿ ಸುಜುಕಿಯ ಈ ಮೈಕ್ರೋ ಎಸ್ಯುವಿ ಖರೀದಿ ಮೂಲಕವೂ ನೀವು ಲಾಭ ಪಡೆಯಬಹುದಾಗಿದೆ. ಈ ಫೆಬ್ರವರಿ ತಿಂಗಳಲ್ಲಿ ಈ ಕಾರಿನ ಖರೀದಿ ಮಾಡುವವರಿಗೆ 49 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ 25 ಸಾವಿರ ರೂಪಾಯಿ ಕನ್ಸ್ಯೂಮರ್ ಆಫರ್, 20 ಸಾವಿರ ರೂ. ಎಕ್ಸ್ಚೇಂಜ್ ಬೋನಸ್ ಹಾಗೂ 4 ಸಾವಿರ ರೂಪಾಯಿ ಕಾರ್ಪೋರೇಟ್ ಬೋಸನ್ ಸೇರಿದೆ. 998 ಸಿಸಿ ಎಂಜಿನ್ ಹೊಂದಿರುವ ಈ ಕಾರು ಪ್ರತಿ ಲೀಟರ್ಗೆ 21 ಕಿಲೋಮೀಟರ್ ಮೈಲೇಜ್ ನೀಡುತ್ತೆ.
ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್ ವಿನಾಯಿತಿ
ಮಾರುತಿ ವ್ಯಾಗನಾರ್ : ವ್ಯಾಗನಾರ್ ಕಾರು ಖರೀದಿಯಿಂದ ನೀವು 32 ಸಾವಿರ ರೂಪಾಯಿ ಉಳಿಕೆ ಮಾಡಬಹುದಾಗಿದೆ. ಇದರಲ್ಲಿ 13 ಸಾವಿರ ರೂಪಾಯಿ ಕನ್ಸೂಮರ್ ಆಫರ್, 15 ಸಾವಿರ ರೂ. ಎಕ್ಸ್ಚೇಂಜ್ ಬೋನಸ್ ಹಾಗೂ 4 ಸಾವಿರ ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಸೇರಿದೆ. ಈ ಆಫರ್ ಕೇವಲ ಸಿಎನ್ಜಿ ವೇರಿಯಂಟ್ಗೆ ಮಾತ್ರ ನೀಡಲಾಗಿದೆ. ಹೀಗಾಗಿ ನೀವು ಪೆಟ್ರೋಲ್ ಮಾಡೆಲ್ ಖರೀದಿ ಮಾಡಬಯಸಿದ್ರೆ ಕನ್ಸೂಮರ್ ಆಫರ್ ಮೈನಸ್ ಆಗಿ 8000 ರೂಪಾಯಿ ಆಗಲಿದೆ.
ಮಾರುತಿ ಸ್ವಿಫ್ಟ್ : ಮಾರುತಿ ಸುಜುಕಿ ಶೀಘ್ರದಲ್ಲೇ ಸ್ವಿಫ್ಟ್ನ ಫೇಸ್ಲಿಫ್ಟ್ ಮಾಡೆಲ್ನ್ನು ಜಾರಿಗೆ ತರಲು ತಯಾರಿ ನಡೆಸಿದೆ. ಈ ತಿಂಗಳಲ್ಲಿ ಸ್ವಿಫ್ಟ್ ಕಾರು ಖರೀದಿ ಮಾಡುವವರಿಗೆ 34 ಸಾವಿರ ರೂಪಾಯಿ ರಿಯಾಯಿತಿ ಸಿಗಲಿದೆ. ಇದರಲ್ಲಿ 10 ಸಾವಿರ ರೂ. ಕನ್ಸೂಮರ್ ಆಫರ್, 20 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಹಾಗೂ 4 ಸಾವಿರ ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಸೇರಿದೆ.
ಮಾರುತಿ ಡಿಜೈರ್ : ಮಾರುತಿ ಡಿಜೈರ್ ಕಾರು ಖರೀದಿದಾರರು 32 ಸಾವಿರ ರೂಪಾಯಿವರೆಗೆ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ 8000 ರೂಪಾಯಿ ಕನ್ಸೂಮರ್ ಆಫರ್, 20 ಸಾವಿರ ರೂಪಾಯಿ ಎಂಕ್ಸ್ಚೇಂಜ್ ಬೋನಸ್ ಹಾಗೂ 4 ಸಾವಿರ ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಸೇರಿದೆ. ಇದರ ಪ್ರೀ – ಫೇಸ್ಲಿಫ್ಟ್ ಮಾಡೆಲ್ಗೆ 25 ಸಾವಿರ ರೂಪಾಯಿ ಕನ್ಸೂಮರ್ ಆಫರ್ ನೀಡಲಾಗಿದೆ.