ಮುಂಬೈ: ಕೊರೋನಾ ಆರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಭಾರಿ ಕುಸಿತ ಉಂಟಾಗಿದೆ. ನಿಫ್ಟಿ 400 ಅಂಕಗಳಷ್ಟು ಕುಸಿತ ಕಂಡಿದೆ.
ಸೆನ್ಸೆಕ್ಸ್ 1300 ಅಂಕಗಳಷ್ಟು ಕುಸಿತವಾಗಿದೆ. ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ ದಾಖಲಿಸಿದೆ. ವಾರದ ಮೊದಲ ದಿನವೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಸೆನ್ಸೆಕ್ಸ್ ಕುಸಿತ ಕಂಡು 48,404.37 ಪಾಯಿಂಟ್ ಕುಸಿತ ಕಂಡಿದೆ. ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.