ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆಯನ್ನ ಪುನಾರಂಭಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಗುರುವಾರದಿಂದ ಮೆಟ್ರೋ ಸೇವೆ ಮುಂಬೈನಲ್ಲಿ ಪುನಾರಂಭಗೊಳ್ಳಲಿದೆ.
ಕೊರೊನಾ ವೈರಸ್ ಹರಡುವಿಕೆಯನ್ನ ಗಮನದಲ್ಲಿಟ್ಟಿರುವ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಆರಂಭ ಎಂಬ ಶೀರ್ಷಿಕೆಯಡಿಯಲ್ಲಿ ಮಾರ್ಗಸೂಚಿಯನ್ನ ಸಿದ್ಧಪಡಿಸಿದೆ.
ಮೆಟ್ರೋ ಸೇವೆಯ ಜೊತೆ ಜೊತೆಯಲ್ಲೇ ಖಾಸಗಿ ಗ್ರಂಥಾಲಯಗಳು, ಬಜಾರ್ಗಳನ್ನೂ ಆರಂಭ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಶಾಪ್ಗಳಲ್ಲಿ ಜನದಟ್ಟಣೆಯನ್ನ ಕಡಿಮೆ ಮಾಡುವ ಸಲುವಾಗಿ ಎರಡು ಗಂಟೆಗಳ ಹೆಚ್ಚಿನ ಅವಧಿ ಅಂದರೆ ರಾತ್ರಿ 9ರವರೆಗೂ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.