ಪುಣೆ: ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊ ಬೆಳೆದು 1.5 ಕೋಟಿ ರೂ. ಗಳಿಸಿದ್ದಾರೆ. 13,000 ಕ್ರೇಟ್ ಟೊಮೆಟೊ ಮಾರಿದ ಅವರಿಗೆ ೊಂದೋವರೆ ಕೋಟಿ ರೂ. ಹಣ ದೊರೆತಿದೆ.
ದೇಶಾದ್ಯಂತ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಟೊಮೆಟೊ ಬೆಳೆದ ಮಹಾರಾಷ್ಟ್ರದ ರೈತ ತುಕಾರಾಂ ಕೋಟ್ಯಧೀಶರಾಗಿದ್ದಾರೆ. ತುಕಾರಾಂ 18 ಎಕರೆ ಕೃಷಿ ಜಮೀನು ಹೊಂದಿದ್ದು, 12 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಪುತ್ರ ಈಶ್ವರ್ ಹಾಗೂ ಸೊಸೆ ಸೋನಾಲಿ ಅವರ ನೆರವಿನೊಂದಿಗೆ ಉತ್ತಮ ಗುಣಮಟ್ಟದ ಟೊಮೆಟೊ ಬೆಳೆದಿದ್ದು, ಒಂದೇ ತಿಂಗಳಲ್ಲಿ 13000 ಕ್ರೇಟ್ ಟೊಮೆಟೊ ಮಾರಿದ ತುಕಾರಾಂ ಭಾಗೋಜಿ ಗಾಯಕರ್ ಎಂಬ ರೈತ ಒಂದೂವರೆ ಕೋಟಿ ರೂ. ಸಂಪಾದಿಸಿದ್ದಾರೆ.
ಕರ್ನಾಟಕದ ಕೋಲಾರದ ರೈತ ಸಹೋದರರು 2000 ಬಾಕ್ಸ್ ಟೊಮೆಟೊ ಮಾರಿ 38 ಲಕ್ಷ ರೂ. ಗಳಿಸಿದ್ದರು. ಮಹಾರಾಷ್ಟ್ರದ ತುಕಾರಾಂ ಅವರು 1.5 ಕೋಟಿ ರೂ. ಗಳಿಸಿದ್ದಾರೆ.