
ಪತ್ರಿ ತಿಂಗಳ ಮೊದಲ ದಿನ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುತ್ತದೆ. ಈ ಬಾರಿಯೂ ಸಿಲಿಂಡರ್ ದರ ಬದಲಾಗಿದೆ. ನೆಮ್ಮದಿ ಸುದ್ದಿಯೆಂದ್ರೆ ಫೆಬ್ರವರಿಯಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಏರಿಕೆ ಕಂಡು ಬಂದಿದೆ.
ವಾಣಿಜ್ಯ ಬಳಕೆಯ 19 ಕೆ.ಜಿ. ಎಲ್ ಪಿ ಜಿ ಸಿಲಿಂಡರ್ ಬೆಲೆ 190 ರೂಪಾಯಿ ಹೆಚ್ಚಾಗಿದೆ. ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜನವರಿ ತಿಂಗಳ ಬೆಲೆಯೇ ಮುಂದುವರೆದಿದೆ. ಹೊಸ ಬೆಲೆ ಫೆಬ್ರವರಿ 1ರಿಂದಲೇ ಜಾರಿಗೆ ಬಂದಿದೆ.
ಡಿಸೆಂಬರ್ ತಿಂಗಳಿನಲ್ಲಿ ಐಒಸಿ, ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಹೆಚ್ಚಳ ಮಾಡಿತ್ತು. ಡಿಸೆಂಬರ್ 2ರಂದು 50 ರೂಪಾಯಿ ಹೆಚ್ಚಳವಾಗಿತ್ತು. ನಂತ್ರ ಡಿಸೆಂಬರ್ 15ರಂದು ಮತ್ತೆ 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಈಗ 1539 ರೂಪಾಯಿಯಾಗಿದೆ. ಈ ಹಿಂದೆ ಇದ್ರ ಬೆಲೆ 1349 ರೂಪಾಯಿಯಾಗಿತ್ತು. ಗೃಹ ಬಳಕೆ ಸಿಲಿಂಡರ್ ಬೆಲೆ 694 ರೂಪಾಯಿಯಿದೆ. ಮುಂದಿನ ತಿಂಗಳು ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಸರ್ಕಾರಿ ತೈಲ ಕಂಪನಿ ವೆಬ್ಸೈಟ್ ನಲ್ಲಿ ನಗರವಾರು ಸಿಲಿಂಡರ್ ಬೆಲೆ ಸಿಗುತ್ತದೆ.