alex Certify ಗ್ರಾಹಕರಿಗೆ ಸಿಹಿ ಸುದ್ದಿ: ಕಮರ್ಷಿಯಲ್​ ಸಿಲಿಂಡರ್​ ದರದಲ್ಲಿ ಭಾರೀ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಸಿಹಿ ಸುದ್ದಿ: ಕಮರ್ಷಿಯಲ್​ ಸಿಲಿಂಡರ್​ ದರದಲ್ಲಿ ಭಾರೀ ಇಳಿಕೆ

ದೇಶದ ಪ್ರಮುಖ ಪೆಟ್ರೋಲಿಯಂ ಕಂಪನಿಗಳಲ್ಲಿ ಎಲ್​​ಪಿಜಿ ಗ್ಯಾಸ್​ ತನ್ನ ಬೆಲೆಯನ್ನ ಕಡಿತ ಮಾಡಿದೆ.  ಗ್ಯಾಸ್​ ಕಂಪನಿಗಳು ಕಮರ್ಷಿಯಲ್​ ಬಳಕೆಗೆ ಉಪಯೋಗಿಸಲ್ಪಡುವ 19 ಕೆಜಿ ಗ್ಯಾಸ್​ ಸಿಲಿಂಡರ್​ನ್ನ ಬೆಲೆಯಲ್ಲಿ 45.50 ರೂಪಾಯಿ ಕಡಿತಗೊಳಿಸಿದೆ. ಆದರೆ ಗೃಹೋಪಯೋಗಿ ಗ್ಯಾಸ್​ ಸಿಲಿಂಡರ್​ಗಳ ದರದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ.

ಗೃಹೋಪಯೋಗಿ ಸಿಲಿಂಡರ್​ ಅಂದರೆ 14 .2 ಕೆಜಿ ತೂಕವುಳ್ಳ ಗ್ಯಾಸ್​ ಸಿಲಿಂಡರ್​​ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್​ ತಿಂಗಳ ಮೊದಲ ಭಾಗದಲ್ಲಿ ಗೃಹೋಪಯೋಗಿ ಸಿಲಿಂಡರ್​ಗಳ ದರದಲ್ಲಿ 10 ರೂಪಾಯಿ ಕಡಿತ ಮಾಡಲಾಗಿತ್ತು.

ಇಂಡೇನ್​ ವೆಬ್​ಸೈಟ್​ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 19 ಕೆಜಿ ಗ್ಯಾಸ್​ ಸಿಲಿಂಡರ್​ ಪರಿಷ್ಕೃತ ದರ 1641 ರೂಪಾಯಿ ಬದಲು 1595.50 ರೂಪಾಯಿ ಆಗಿದೆ. ಮುಂಬೈನಲ್ಲಿ 1590.50 ರೂಪಾಯಿಗಳ ಬದಲು ಇನ್ಮೇಲೆ 1545 ರೂಪಾಯಿ ಪಾವತಿಸಿದ್ರೆ ಸಾಕು. ಇನ್ನು ಕೊಲ್ಕತ್ತಾದಲ್ಲಿ 1713 ದರದಲ್ಲಿ ಇಳಿಕೆ ಮಾಡಿ 1667.50 ರೂಪಾಯಿ ನಿಗದಿ ಮಾಡಲಾಗಿದೆ.

2021ರಲ್ಲಿ ಗೃಹೋಪಯೋಗಿ ಸಿಲಿಂಡರ್​ಗಳ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜನವರಿ ತಿಂಗಳಲ್ಲಿ ಈ ಸಿಲಿಂಡರ್​ ದರದಲ್ಲಿ ಅಷ್ಟೊಂದು ಬದಲಾವಣೆ ಉಂಟಾಗಿಲ್ಲ. ಆದರೆ ಫೆಬ್ರವರಿ 4ರಂದು 694 ರೂಪಾಯಿಯಿಂದ 25 ರೂಪಾಯಿ ಏರಿಕೆ ಮಾಡಿ 719 ರೂಪಾಯಿ ನಿಗದಿ ಮಾಡಲಾಗಿತ್ತು . ಇದಾದ ಬಳಿಕ 15 ಫೆಬ್ರವರಿಯಂದು ಸಿಲಿಂಡರ್​ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ 25 ಫೆಬ್ರವರಿಯಲ್ಲಿ ಈ ದರ ಇನ್ನೊಮ್ಮೆ 25 ರೂಪಾಯಿಗೆ ಏರಿಕೆಯಾಗಿತ್ತು. ಮಾರ್ಚ್ 1ನೇ ತಾರೀಖಿನಂದು ಮತ್ತೆ 25 ರೂಪಾಯಿ ಏರಿಕೆ ಕಂಡು ಗೃಹೋಪಯೋಗಿ 819 ರೂಪಾಯಿ ಆಗಿತ್ತು. ಏಪ್ರಿಲ್​ ತಿಂಗಳಲ್ಲಿ ಸಿಲಿಂಡರ್​ ದರದಲ್ಲಿ 10 ರೂಪಾಯಿ ಇಳಿಕೆ ಆಗಿದ್ದರಿಂದ ಗೃಹೋಪಯೋಗಿ ಸಿಲಿಂಡರ್​​ ದರ 809 ರೂಪಾಯಿ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...