ದೇಶದ ಪ್ರಮುಖ ಪೆಟ್ರೋಲಿಯಂ ಕಂಪನಿಗಳಲ್ಲಿ ಎಲ್ಪಿಜಿ ಗ್ಯಾಸ್ ತನ್ನ ಬೆಲೆಯನ್ನ ಕಡಿತ ಮಾಡಿದೆ. ಗ್ಯಾಸ್ ಕಂಪನಿಗಳು ಕಮರ್ಷಿಯಲ್ ಬಳಕೆಗೆ ಉಪಯೋಗಿಸಲ್ಪಡುವ 19 ಕೆಜಿ ಗ್ಯಾಸ್ ಸಿಲಿಂಡರ್ನ್ನ ಬೆಲೆಯಲ್ಲಿ 45.50 ರೂಪಾಯಿ ಕಡಿತಗೊಳಿಸಿದೆ. ಆದರೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ.
ಗೃಹೋಪಯೋಗಿ ಸಿಲಿಂಡರ್ ಅಂದರೆ 14 .2 ಕೆಜಿ ತೂಕವುಳ್ಳ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್ ತಿಂಗಳ ಮೊದಲ ಭಾಗದಲ್ಲಿ ಗೃಹೋಪಯೋಗಿ ಸಿಲಿಂಡರ್ಗಳ ದರದಲ್ಲಿ 10 ರೂಪಾಯಿ ಕಡಿತ ಮಾಡಲಾಗಿತ್ತು.
ಇಂಡೇನ್ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಪರಿಷ್ಕೃತ ದರ 1641 ರೂಪಾಯಿ ಬದಲು 1595.50 ರೂಪಾಯಿ ಆಗಿದೆ. ಮುಂಬೈನಲ್ಲಿ 1590.50 ರೂಪಾಯಿಗಳ ಬದಲು ಇನ್ಮೇಲೆ 1545 ರೂಪಾಯಿ ಪಾವತಿಸಿದ್ರೆ ಸಾಕು. ಇನ್ನು ಕೊಲ್ಕತ್ತಾದಲ್ಲಿ 1713 ದರದಲ್ಲಿ ಇಳಿಕೆ ಮಾಡಿ 1667.50 ರೂಪಾಯಿ ನಿಗದಿ ಮಾಡಲಾಗಿದೆ.
2021ರಲ್ಲಿ ಗೃಹೋಪಯೋಗಿ ಸಿಲಿಂಡರ್ಗಳ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜನವರಿ ತಿಂಗಳಲ್ಲಿ ಈ ಸಿಲಿಂಡರ್ ದರದಲ್ಲಿ ಅಷ್ಟೊಂದು ಬದಲಾವಣೆ ಉಂಟಾಗಿಲ್ಲ. ಆದರೆ ಫೆಬ್ರವರಿ 4ರಂದು 694 ರೂಪಾಯಿಯಿಂದ 25 ರೂಪಾಯಿ ಏರಿಕೆ ಮಾಡಿ 719 ರೂಪಾಯಿ ನಿಗದಿ ಮಾಡಲಾಗಿತ್ತು . ಇದಾದ ಬಳಿಕ 15 ಫೆಬ್ರವರಿಯಂದು ಸಿಲಿಂಡರ್ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ 25 ಫೆಬ್ರವರಿಯಲ್ಲಿ ಈ ದರ ಇನ್ನೊಮ್ಮೆ 25 ರೂಪಾಯಿಗೆ ಏರಿಕೆಯಾಗಿತ್ತು. ಮಾರ್ಚ್ 1ನೇ ತಾರೀಖಿನಂದು ಮತ್ತೆ 25 ರೂಪಾಯಿ ಏರಿಕೆ ಕಂಡು ಗೃಹೋಪಯೋಗಿ 819 ರೂಪಾಯಿ ಆಗಿತ್ತು. ಏಪ್ರಿಲ್ ತಿಂಗಳಲ್ಲಿ ಸಿಲಿಂಡರ್ ದರದಲ್ಲಿ 10 ರೂಪಾಯಿ ಇಳಿಕೆ ಆಗಿದ್ದರಿಂದ ಗೃಹೋಪಯೋಗಿ ಸಿಲಿಂಡರ್ ದರ 809 ರೂಪಾಯಿ ಆಗಿದೆ.