ದೇಶಾದ್ಯಂತ ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ 50 ರೂಪಾಯಿಗಳಷ್ಟು ಏರಿಕೆಯಾಗಿದೆ ಅಂತಾ ಭಾರತೀಯ ತೈಲ ನಿಗಮ ಮಾಹಿತಿ ನೀಡಿದೆ. ಕಳೆದ 5 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ನ ಬೆಲೆ ಹೆಚ್ಚಾಗಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯನ್ನ ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ ಹಾಗೂ ಮಾಸಿಕ ಆಧಾರದ ಮೇಲೆ ದರವನ್ನ ಪರಿಷ್ಕರಿಸಲಾಗುತ್ತದೆ. ಕೊನೆಯ ಬಾರಿಗೆ ಜುಲೈನಲ್ಲಿ ಎಲ್ಪಿಜಿ ಸಿಲಿಂಡರ್ ದರ ಬದಲಾವಣೆಯಾಗಿತ್ತು.
ಪರಿಷ್ಕೃತ ದರದಿಂದಾಗಿ 14.2 ಕೆಜಿಯುಳ್ಳ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 647 ರೂ., ದೆಹಲಿಯಲ್ಲಿ 644 ರೂ., ಕೊಲ್ಕತ್ತಾದಲ್ಲಿ 670.50 ರೂಪಾಯಿ ಹಾಗೂ ಮುಂಬೈನಲ್ಲಿ 644 ರೂಪಾಯಿಗೆ ತಲುಪಿದೆ. ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 660 ರೂಪಾಯಿ ತಲುಪಿದೆ.
ಭಾರತದಲ್ಲಿ ವರ್ಷಕ್ಕೆ ಗರಿಷ್ಠ 12 ಎಲ್ಪಿಜಿ ಸಿಲಿಂಡರ್ ಖರೀದಿಗೆ ಸಬ್ಸಿಡಿ ದರದಲ್ಲಿ ಅವಕಾಶವಿದೆ. ಸಿಲಿಂಡರ್ಗಳನ್ನ ಖರೀದಿಸುವ ಸಂದರ್ಭದಲ್ಲಿ ನೀವು ಪೂರ್ಣ ಬೆಲೆಗೆ ಖರೀದಿ ಮಾಡಬೇಕಾಗುತ್ತೆ. ಬಳಿಕ ಸಬ್ಸಿಡಿ ಹಣ ಗ್ರಾಹಕನ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತೆ.