alex Certify LPG ಸಿಲಿಂಡರ್‌ ಬಳಕೆದಾರರಿಗೆ ತಿಳಿದಿರಲೇ ಬೇಕು ಈ ಬಹು ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಿಲಿಂಡರ್‌ ಬಳಕೆದಾರರಿಗೆ ತಿಳಿದಿರಲೇ ಬೇಕು ಈ ಬಹು ಮುಖ್ಯ ಮಾಹಿತಿ

ಗ್ಯಾಸ್ ಸಿಲಿಂಡರ್ ಸ್ಪೋಟಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಾಕಷ್ಟು ಜನರ ಜೀವ ಈ ಸಿಲಿಂಡರ್ ಸ್ಪೋಟಕ್ಕೆ ಬಲಿಯಾಗಿರೋದನ್ನು ನೋಡಿದ್ದೇವೆ. ಇನ್ನಷ್ಟು ಜನರಿಗೆ ಗಂಭೀರ ಸ್ವರೂಪದ ಗಾಯಗಳೂ ಆಗಿವೆ. ಎಲ್‌ಪಿಜಿಗೆ ಸಂಬಂಧಿಸಿದ ಅವಘಡಗಳು ನಡೆದಾಗ ಈ ಸ್ಪೋಟದಿಂದ ಹಾನಿಯಾದವರಿಗೆ ಇನ್ಷೂರೆನ್ಸ್ ಸೌಲಭ್ಯ ಇದೆ.

ಹೌದು, ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್ ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿ ಮಾಡಿದವರಿಗೆ ಇಂತಹ ಅವಘಡಗಳಿಂದ ಹಾನಿಯಾಗಿದ್ದಲ್ಲಿ ವಿಮೆ ಸೌಲಭ್ಯ ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಡೀಲರ್‌ಗಳಿಗೆ ಈ ಸೌಲಭ್ಯ ಸಿಗಲಿದೆ. ಆದರೆ ಇಷ್ಟು ಕಂಪನಿಗಳು ಸರ್ಕಾರಿ ಸ್ವಾಮ್ಯದ ಎಲ್‌ಪಿಜಿಗೆ ಒಳಪಟ್ಟಿರಬೇಕು.

ಇನ್ನು ಇಂತಹ ಅವಘಡಗಳು ನಡೆದಾಗ ವ್ಯಕ್ತಿ ಮೃತಪಟ್ಟಲ್ಲಿ ವೈಯಕ್ತಿಕ ಅಪಘಾತದ ಒಟ್ಟು ಮೊತ್ತ 6,00,000 ರೂಪಾಯಿ ಇದೆ. ಹಾಗೆಯೇ ಎಲ್‌ಪಿಜಿ ಸಂಬಂಧಿಸಿದ ಸ್ಫೋಟದಲ್ಲಿ ವ್ಯಕ್ತಿಗೆ ಗಾಯಗಳಾಗಿದ್ದರೆ ಅಂತವರ ವೈದ್ಯಕೀಯ ವೆಚ್ಚ 30 ಲಕ್ಷ ಇರುತ್ತದೆ. ಅದರಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ 2,00,000 ರೂಪಾಯಿ ಸಿಗುತ್ತದೆ. ಇನ್ನು ಈ ಸ್ಪೋಟದಲ್ಲಿ ಆಸ್ತಿಗೇನಾದರೂ ನಷ್ಟವಾದಲ್ಲಿ ಒಂದು ಅವಘಡಕ್ಕೆ ಗರಿಷ್ಠ 2,00,000 ರುಪಾಯಿ ದೊರೆಯುತ್ತದೆ. ಆದರೆ ಇದು ನೊಂದಾಯಿತ ಗ್ರಾಹಕರ ಆವರಣದಲ್ಲಿ ಆಗಿರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...