alex Certify ಯಾವ ಜಿಲ್ಲೆಗಳಿಗೆ ರಿಲೀಫ್: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಸಂಪೂರ್ಣ ‘ಮಾಹಿತಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಜಿಲ್ಲೆಗಳಿಗೆ ರಿಲೀಫ್: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಸಂಪೂರ್ಣ ‘ಮಾಹಿತಿ’

ಬೆಂಗಳೂರು: ಲಾಕ್ ಡೌನ್ ನಿಂದ ವಿನಾಯಿತಿ ಪಡೆದ ಜಿಲ್ಲೆಗಳಲ್ಲಿ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.

ವಿನಾಯಿತಿ ನೀಡಲಾದ ಜಿಲ್ಲೆಗಳು:

ಚಿಕ್ಕಮಗಳೂರು, ರಾಯಚೂರು, ರಾಮನಗರ, ಹಾಸನ, ಶಿವಮೊಗ್ಗ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ, ಕೊಡಗು, ಹಾವೇರಿ, ಚಾಮರಾಜನಗರ, ಕೊಪ್ಪಳ, ಚಿತ್ರದುರ್ಗ, ಜಿಲ್ಲೆಗಳಿಗೆ ವಿನಾಯಿತಿ ನೀಡಲಾಗಿದೆ.

ನಿರ್ಬಂಧವೇನು..?

ಕೋರೋನಾ ಸೋಂಕು ಇಲ್ಲದ ಈ ಜಿಲ್ಲೆಗಳನ್ನು ಹಸಿರು ವಲಯಗಳೆಂದು ಗುರುತಿಸಲಾಗಿದ್ದು ಷರತ್ತುಗಳೊಂದಿಗೆ ವಿವಿಧ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗಿದೆ.

ಶೇಕಡ 50ರಷ್ಟು ಕಾರ್ಮಿಕರು ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಬೇಕು. ಕೈಗಾರಿಕೆ ಘಟಕಗಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ವಾಹನ ವಾಹನ ವ್ಯವಸ್ಥೆ ಕಲ್ಪಿಸಬೇಕು. ವಿಶೇಷ ಆರ್ಥಿಕ ವಲಯ ಮತ್ತು ಕೈಗಾರಿಕೆ ಘಟಕಗಳ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಷರತ್ತು ವಿಧಿಸಲಾಗಿದೆ.

ಯಾವ ಅಂಗಡಿ ತೆರೆಯಲು ಅನುಮತಿ..?

ಬಣ್ಣದ ಅಂಗಡಿ, ರೈಸ್ ಮಿಲ್, ಹಾರ್ಡ್ವೇರ್, ಹಿಟ್ಟಿನ ಗಿರಣಿ, ಸ್ಟುಡಿಯೋ, ಎಲೆಕ್ಟ್ರಿಕಲ್, ಪಾದರಕ್ಷೆ ಅಂಗಡಿ, ಮರಳು, ಕಲ್ಲು ಗಣಿಗಾರಿಕೆ, ಫ್ಯಾನ್ಸಿ ಸ್ಟೋರ್, ಟೈಯರ್ ಟ್ಯೂಬ್ ಅಂಗಡಿಗಳು, ಜನರಲ್ ಸ್ಟೋರ್ಸ್, ಪುಸ್ತಕದ ಅಂಗಡಿ, ಕೃಷಿ ತೋಟಗಾರಿಕೆ ಪರಿಕರಗಳ ಅಂಗಡಿ, ಮುದ್ರಣಾಲಯ, ಸ್ಟೇಷನರಿ, ಜೆರಾಕ್ಸ್, ಕನ್ನಡಕದಂಗಡಿ, ಸಾಮಿಲ್, ಜೆರಾಕ್ಸ್ ಸೇರಿದಂತೆ ಹಲವು ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

ಯಾವುದಕ್ಕೆ ನಿರ್ಬಂಧ..?

ಬಟ್ಟೆ ಅಂಗಡಿ, ಚಿನ್ನ ಬೆಳ್ಳಿ ಅಂಗಡಿ, ಸಲೂನ್ ಶಾಪ್, ಬ್ಯೂಟಿ ಪಾರ್ಲರ್, ರಸ್ತೆ ಬದಿ ತಿಂಡಿ, ಆಹಾರ, ತಿನಿಸುಗಳ ಮಾರಾಟ, ಮದ್ಯ, ತಂಬಾಕು ಗುಟ್ಕಾ  ಮಾರಾಟ, ಬಸ್, ಆಟೋ, ಪ್ರಯಾಣಿಕ ವಾಹನಗಳು, ಸಿನಿಮಾ ಟಾಕೀಸ್ ಇರುವುದಿಲ್ಲ. ರೈಲು, ವಿಮಾನ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...