alex Certify ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: 45 ನಿಮಿಷದಲ್ಲಿ 5 ಲಕ್ಷ ರೂ.ವರೆಗೂ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: 45 ನಿಮಿಷದಲ್ಲಿ 5 ಲಕ್ಷ ರೂ.ವರೆಗೂ ಸಾಲ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. 5 ಲಕ್ಷ ರೂಪಾಯಿಯವರೆಗೆ ತುರ್ತು ಸಾಲ ಪಡೆಯಲು ಅವಕಾಶ ನೀಡಿದೆ.

45 ನಿಮಿಷದೊಳಗೆ 5 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಯೋಜನೆಯನ್ನು ಯೋನೋ ಎಸ್ಬಿಐ ಆಪ್ ಡೌನ್ ಲೋಡ್ ಮಾಡಿಕೊಂಡು ಪ್ರೀ ಅಪ್ರೂವ್ಡ್ ಲೋನ್ ಆಯ್ಕೆಯನ್ನು ಕ್ಲಿಕ್ಕಿಸಬೇಕು. ಸಾಲದ ಅವಧಿ ಮತ್ತು ಮೊತ್ತವನ್ನು ದಾಖಲಿಸಿದ ಬಳಿ ಗ್ರಾಹಕರ ನೊಂದಾಯಿತ ಮೊಬೈಲ್ಗೆ ಒಟಿಪಿ ಬರಲಿದ್ದು ಅದನ್ನು ದಾಖಲಿಸಬೇಕು. ನಂತರ ಸಾಲಕ್ಕೆ ಅನುಮೋದನೆ ನೀಡಲಾಗುವುದು.

ಶೇಕಡ 10.5 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಸಾಲ ವಿತರಣೆಯಾದ 6 ತಿಂಗಳ ನಂತರ ಇಎಂಐ ಪಾವತಿ ಆರಂಭವಾಗಲಿದೆ. PAPL ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 567676 ಗೆ ಎಸ್ಎಂಎಸ್ ಮಾಡುವ ಮೂಲಕ ಸಾಲ ಪಡೆಯಲು ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...