alex Certify ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ವಿಶೇಷ ಕೊಡುಗೆಯಾಗಿ ಬಡ್ಡಿದರ ಇಳಿಕೆ ಮಾಡಿದ ಎಲ್ಐಸಿ ಹೌಸಿಂಗ್ ಫೈನಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ವಿಶೇಷ ಕೊಡುಗೆಯಾಗಿ ಬಡ್ಡಿದರ ಇಳಿಕೆ ಮಾಡಿದ ಎಲ್ಐಸಿ ಹೌಸಿಂಗ್ ಫೈನಾನ್ಸ್

ನವದೆಹಲಿ: ಎಲ್ಐಸಿ ಹೌಸಿಂಗ್ ಫೈನಾನ್ಸ್ ನಿಂದ ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ. 50 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಬಡ್ಡಿ ದರವನ್ನು ಶೇಕಡ 6.90 ರಿಂದ ಶೇಕಡ 6.66 ಕ್ಕೆ ಇಳಿಕೆ ಮಾಡಲಾಗಿದೆ.

ಈ ಮೂಲಕ ಎಲ್ಐಸಿ ಹೌಸಿಂಗ್ ಫೈನಾನ್ಸ್ ಗೃಹಸಾಲದ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಮುಂದಾಗಿದೆ. ವೇತನದಾರರಿಗೆ 50 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಬಡ್ಡಿ ದರ ಇಳಿಕೆ ಅನ್ವಯವಾಗಲಿದೆ. 2021 ರ ಆಗಸ್ಟ್ 31 ರ ವರೆಗೆ ಸೀಮಿತ ಅವಧಿಗೆ ಬಡ್ಡಿದರ ಇಳಿಕೆ ಕೊಡುಗೆ ಸಿಗಲಿದೆ. ಸಾಲದ ಅವಧಿ 30 ವರ್ಷಗಳಾಗಿರುತ್ತದೆ.

ಎಲ್ಐಸಿ ಹೌಸಿಂಗ್ ಫೈನಾನ್ಸ್ ದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಾಲ ಪಡೆದವರ ಸಿಬಿಲ್ ಕ್ರೆಡಿಟ್ ಸ್ಕೋರ್, ಸಾಲದ ವಿಶ್ವಾಸಾರ್ಹತೆ ಕೂಡ ಈ ಬಡ್ಡಿದರ ಇಳಿಕೆಗೆ ನಿರ್ಣಾಯಕವಾದ ಅಂಶಗಳಾಗಿರುತ್ತವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...