ನವದೆಹಲಿ: ಎಲ್ಐಸಿ ಹೌಸಿಂಗ್ ಫೈನಾನ್ಸ್ ನಿಂದ ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ. 50 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಬಡ್ಡಿ ದರವನ್ನು ಶೇಕಡ 6.90 ರಿಂದ ಶೇಕಡ 6.66 ಕ್ಕೆ ಇಳಿಕೆ ಮಾಡಲಾಗಿದೆ.
ಈ ಮೂಲಕ ಎಲ್ಐಸಿ ಹೌಸಿಂಗ್ ಫೈನಾನ್ಸ್ ಗೃಹಸಾಲದ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಮುಂದಾಗಿದೆ. ವೇತನದಾರರಿಗೆ 50 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಬಡ್ಡಿ ದರ ಇಳಿಕೆ ಅನ್ವಯವಾಗಲಿದೆ. 2021 ರ ಆಗಸ್ಟ್ 31 ರ ವರೆಗೆ ಸೀಮಿತ ಅವಧಿಗೆ ಬಡ್ಡಿದರ ಇಳಿಕೆ ಕೊಡುಗೆ ಸಿಗಲಿದೆ. ಸಾಲದ ಅವಧಿ 30 ವರ್ಷಗಳಾಗಿರುತ್ತದೆ.
ಎಲ್ಐಸಿ ಹೌಸಿಂಗ್ ಫೈನಾನ್ಸ್ ದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಾಲ ಪಡೆದವರ ಸಿಬಿಲ್ ಕ್ರೆಡಿಟ್ ಸ್ಕೋರ್, ಸಾಲದ ವಿಶ್ವಾಸಾರ್ಹತೆ ಕೂಡ ಈ ಬಡ್ಡಿದರ ಇಳಿಕೆಗೆ ನಿರ್ಣಾಯಕವಾದ ಅಂಶಗಳಾಗಿರುತ್ತವೆ ಎಂದು ಹೇಳಲಾಗಿದೆ.