
ನವದೆಹಲಿ: ವಿಮೆ ಪಾಲಿಸಿಗೆ ಆಧಾರ್ ಕಾರ್ಡ್ ಪರಿಗಣಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಗ್ರಾಹಕರ ಆಧಾರ್ ಗುರುತಿನ ಚೀಟಿಯನ್ನು ದಾಖಲೆಯಾಗಿ ಪರಿಗಣಿಸಿ ವಿಮೆ ಪಾಲಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಬೇನಾಮಿ ಕಂಪನಿಗಳ ಹೆಸರಿನಲ್ಲಿ ನಡೆಯುವ ವಹಿವಾಟು ಮತ್ತು ಹಣಕಾಸು ಅಕ್ರಮ ತಡೆಯುವ ಉದ್ದೇಶದಿಂದ ಆಧಾರ್ ದಾಖಲೆಯಾಗಿ ಪರಿಗಣಿಸಿ ಮಾರಾಟ ಮಾಡಲು ತಿಳಿಸಲಾಗಿದೆ. ಇ-ಕೆವೈಸಿ ನಡೆಸುತ್ತಿರುವ ವಿಮೆ ಕಂಪನಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಎಲ್ಐಸಿ, ಬಜಾಜ್ ಅಲಯನ್ಸ್, ಐಸಿಐಸಿಐ ಸೇರಿದಂತೆ 24 ಕಂಪನಿಗಳಿಗೆ ಆಧಾರ್ ದಾಖಲೆ ಪರಿಗಣಿಸಿ ಪಾಲಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.