alex Certify BIG BREAKING: ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ ಅವಧಿ ಮತ್ತೊಮ್ಮೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ ಅವಧಿ ಮತ್ತೊಮ್ಮೆ ವಿಸ್ತರಣೆ

ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಹಲವು ಬಾರಿ ಗಡುವು ವಿಧಿಸಿತ್ತು. ಆಧಾರ್ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು.

ಬಳಿಕ ಪ್ಯಾನ್​ – ಆಧಾರ್​ ಲಿಂಕ್​ ಮಾಡುವ ದಿನಾಂಕವನ್ನ ಮಾರ್ಚ್​ 31, 2021ಕ್ಕೆ ವಿಸ್ತರಿಸಲಾಗಿತ್ತು. ಈ ಹಿಂದೆ ಪಾನ್​​ ಕಾರ್ಡ್​ನ್ನ ಆಧಾರ್​ ಕಾರ್ಡ್​ಗೆ ಲಿಂಕ್​ ಮಾಡಲು ಜೂನ್​ 30, 2020ರವರೆಗೆ ಗಡುವು ನೀಡಲಾಗಿತ್ತು.

ಇಂದು ಈ ಗಡುವು ಅಂತ್ಯಗೊಂಡಿದ್ದು, ಇದೀಗ ಕೇಂದ್ರ ಸರ್ಕಾರ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಮಾರ್ಚ್‌ 31,2021 ರಿಂದ ಜೂನ್‌ 30,2021 ರವರೆಗೆ ಗಡುವನ್ನು ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಲಿಂಕ್‌ ಮಾಡುವುದು ಅನಿವಾರ್ಯವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...