alex Certify ಕಣ್ಮುಚ್ಚಿ ತೆರೆಯೋದ್ರೊಳಗೆ ಕೋಟ್ಯಾಧಿಪತಿಗಳಾದ ಕಾರ್ಮಿಕರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮುಚ್ಚಿ ತೆರೆಯೋದ್ರೊಳಗೆ ಕೋಟ್ಯಾಧಿಪತಿಗಳಾದ ಕಾರ್ಮಿಕರು..!

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳನ್ನ ಪತ್ತೆ ಮಾಡುವ ಮೂಲಕ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ .

ಜರೂರ್​ಪುರದ ಗಣಿಯಿಂದ ದಿಲೀಪ್​ ಮಿಸ್ತ್ರಿ 7.44 ಕ್ಯಾರೆಟ್​ ವಜ್ರ ಹೊರತೆಗೆದ್ರೆ, ಲಖನ್​ ಯಾದವ್​ ಕೃಷ್ಣ ಕಲ್ಯಾಣ್​ಪುರ ಪ್ರದೇಶದಲ್ಲಿ 14.98 ಕ್ಯಾರಟ್​ ವಜ್ರ ತೆಗೆದಿದ್ದಾರೆ ಅಂತಾ ವಜ್ರ ನಿರೀಕ್ಷಕ ಅನುಪಮ್​ ಸಿಂಗ್​ ಮಾಹಿತಿ ನೀಡಿದ್ದಾರೆ.

ಈ ವಜ್ರಗಳನ್ನ ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ ಕಾರ್ಮಿಕರ ಪಾಲಾಗಲಿದೆ. 7.44 ಕ್ಯಾರೆಟ್​ ವಜ್ರ 30 ಲಕ್ಷ ರೂಪಾಯಿ ಬೆಲೆ ಬಾಳಿದ್ರೆ ಇನ್ನೊಂದು ವಜ್ರಕ್ಕೆ ಅದರ ದುಪ್ಪಟ್ಟು ಹಣ ಸಿಗಲಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಂದೇಲ್ ಕಂಡ್ ನ ಹಿಂದುಳಿದ ಪ್ರದೇಶಗಳಲ್ಲೊಂದಾದ ಪನ್ನಾ ವಜ್ರ ಗಣಿಗಾರಿಕೆಗೆ ಹೆಸರುವಾಸಿಯಾದ ಪ್ರದೇಶವಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...