ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್ ತೂಕದ ಎರಡು ವಜ್ರದ ಹರಳನ್ನ ಪತ್ತೆ ಮಾಡುವ ಮೂಲಕ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ .
ಜರೂರ್ಪುರದ ಗಣಿಯಿಂದ ದಿಲೀಪ್ ಮಿಸ್ತ್ರಿ 7.44 ಕ್ಯಾರೆಟ್ ವಜ್ರ ಹೊರತೆಗೆದ್ರೆ, ಲಖನ್ ಯಾದವ್ ಕೃಷ್ಣ ಕಲ್ಯಾಣ್ಪುರ ಪ್ರದೇಶದಲ್ಲಿ 14.98 ಕ್ಯಾರಟ್ ವಜ್ರ ತೆಗೆದಿದ್ದಾರೆ ಅಂತಾ ವಜ್ರ ನಿರೀಕ್ಷಕ ಅನುಪಮ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ವಜ್ರಗಳನ್ನ ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ ಕಾರ್ಮಿಕರ ಪಾಲಾಗಲಿದೆ. 7.44 ಕ್ಯಾರೆಟ್ ವಜ್ರ 30 ಲಕ್ಷ ರೂಪಾಯಿ ಬೆಲೆ ಬಾಳಿದ್ರೆ ಇನ್ನೊಂದು ವಜ್ರಕ್ಕೆ ಅದರ ದುಪ್ಪಟ್ಟು ಹಣ ಸಿಗಲಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಂದೇಲ್ ಕಂಡ್ ನ ಹಿಂದುಳಿದ ಪ್ರದೇಶಗಳಲ್ಲೊಂದಾದ ಪನ್ನಾ ವಜ್ರ ಗಣಿಗಾರಿಕೆಗೆ ಹೆಸರುವಾಸಿಯಾದ ಪ್ರದೇಶವಾಗಿದೆ