alex Certify BIG BREAKING: ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ; ನಾಳೆಯಿಂದಲೇ ಜಾರಿ: ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ; ನಾಳೆಯಿಂದಲೇ ಜಾರಿ: ಇಲ್ಲಿದೆ ವಿವರ

ಬೆಂಗಳೂರು: ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಲಿದೆ. ನಾಳೆಯಿಂದಲೇ ನಂದಿನಿ ಹಾಲಿನ ದರ ಏರಿಕೆ ಜಾರಿಗೆ ಬರಲಿದೆ.

ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದರ ಹೆಚ್ಚಳದ ಬಗ್ಗೆ ಪ್ರಕಟಣೆ ನೀಡಿದ್ದಾರೆ. ನಾಳೆಯಿಂದಲೇ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ ಎರಡು ರೂಪಾಯಿ ಹೆಚ್ಚಳವಾಗಲಿದೆ.

ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಹಾಲಿನ ದರ ಹೆಚ್ಚಳದ ಬಗ್ಗೆ ಸಭೆ ನಡೆಸಿದ್ದು, ರೈತರಿಗೆ ಸಮಸ್ಯೆ ಆಗಬಾರದು, ಗ್ರಾಹಕರಿಗೂ ತೊಂದರೆ ಆಗಬಾರದು. ರೈತರು, ಗ್ರಾಹಕರಿಗೆ ತೊಂದರೆ ಆಗದಂತೆ ಒಂದು ಸೂತ್ರ ರೂಪಿಸುವಂತೆ ಹೇಳಿದ್ದರು. ಅಂತೆಯೇ ದರ ಹೆಚ್ಚಳ ಮಾಡಲಾಗಿದೆ.

ನವೆಂಬರ್ 14ರಂದು ಕೆಎಂಎಫ್ ಲೀಟರ್ ಹಾಲು, ಮೊಸರಿನ ದರ 3 ರೂಪಾಯಿ ಏರಿಕೆ ಮಾಡಿದ್ದು, ಸಿಎಂ ದಿಢೀರ್ ಬ್ರೇಕ್ ಹಾಕಿದ್ದರು.

ದರ ಏರಿಕೆ ವಿವರ

ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37 ರಿಂದ 39 ರೂ.

ಹೋಮೋಜಿನೈಸ್ಡ್ ಟೋನ್ಡ್ ಹಾಲು ಲೀಟರ್ ಗೆ 38 ರಿಂದ 40 ರೂ.

ಹೋಮೋಜಿನೈಸ್ಡ್ ಹಸುವಿನ ಹಾಲು 42 ರಿಂದ 44 ರೂ.

ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43 ರಿಂದ 45 ರೂ..

ಹೋಮೋಜಿನೈಸ್ಡ್ ಸ್ಟಾಂಡರ್ಡ್ ಹಾಲು 44 ರಿಂದ 46 ರೂ.

ನಂದಿನಿ ಸಮೃದ್ಧಿ ಹಾಲು ಲೀಟರ್ ಗೆ 48 ರಿಂದ 50 ರೂ.

ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50 ರಿಂದ 52 ರೂ.

ನಂದಿನಿ ಮೊಸರು ಪ್ರತಿ ಕೆಜಿಗೆ 45 ರಿಂದ 47 ರೂ.ಗೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...