
ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. ಎಷ್ಟು ವರ್ಷ ಈ ಕಡತಗಳನ್ನೆಲ್ಲಾ ಕಾಪಿಡಬೇಕು ಎಂಬುದು ಪ್ರತಿಯೊಬ್ಬ ತೆರಿಗೆದಾರರ ಮನಸ್ಸಿನಲ್ಲಿರುವ ಪ್ರಶ್ನೆಯಾಗಿರುತ್ತದೆ.
ಐಟಿಆರ್ ಸಲ್ಲಿಸುವ ವೇಳೆ ಇದೆಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುವುದಿಲ್ಲ. ಆದರೆ ನೋಟಿಸ್ ಕಳುಹಿಸುವ ಮೂಲಕ ಐಟಿಆರ್‌ನಲ್ಲಿ ಕ್ಲೈಮ್ ಮಾಡಿರುವುದನ್ನು ಸಾಬೀತುಪಡಿಸುವಂತೆ ಕೇಳುವ ಹಕ್ಕು ಆದಾಯ ತೆರಿಗೆ ಇಲಾಖೆಗಿದೆ. ಹಾಗಾಗಿ ಬಾಡಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ, ಸೆಕ್ಷನ್ 80 ಸಿ ಅಡಿ ಉಳಿತಾಯದ ದಾಖಲೆಗಳು ಇತ್ಯಾದಿ ರಿಟರ್ನ್ಸ್‌ನಲ್ಲಿ ನೀವು ಮಾಡುವ ಕ್ಲೈಮ್ ಗಳನ್ನು ಸಾಬೀತುಪಡಿಸುತ್ತವೆ, ಹಾಗಾಗಿ ಐಟಿಆರ್ ಫೈಲ್ ಮಾಡಿದ ಮೇಲೂ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ.
1.8 ಲಕ್ಷ ರೂ. ಹೂಡಿಕೆಯಲ್ಲಿ ಶುರುಮಾಡಿ ಲಾಭಕರ ಬ್ಯುಸಿನೆಸ್
ಎಷ್ಟು ಅವಧಿ ಕಾಲ ಈ ದಾಖಲೆಗಳನ್ನು ತೆರಿಗೆದಾರ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಆದಾಯ ತೆರಿಗೆ ಕಾಯ್ದೆಯ ಯಾವ ನಿಯಮಗಳೂ ನೇರವಾಗಿ ಹೇಳುವುದಿಲ್ಲ. ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 149ರಲ್ಲಿ ತೆರಿಗೆದಾರನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುವ ಸಂಬಂಧ ಸಮಯದ ಮಿತಿಯನ್ನು ಉಲ್ಲೇಖಿಸಲಾಗಿದೆ. ಹಣಕಾಸು ವರ್ಷವೊಂದು ಮುಕ್ತಾಯವಾದಲ್ಲಿಂದ 7 ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದಾಗಿದೆ. ಹಾಗಾಗಿ 7 ವರ್ಷಗಳ ಕಾಲ ತೆರಿಗೆದಾರ ಈ ದಾಖಲೆಗಳನ್ನೆಲ್ಲ ಕಾಪಿಡಬೇಕಾಗುತ್ತದೆ. ಆದರೆ ವಿದೇಶಿ ಆಸ್ತಿಗಳಿಂದ ಆದಾಯವನ್ನು ನೀವು ಹೊಂದಿದ್ದರೆ 17 ವರ್ಷಗಳ ಕಾಲ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.
ʼವರ್ಕ್ ಫ್ರಂ ಹೋಂʼ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
2017ರ ಬಜೆಟ್‌ನಲ್ಲಿ ಸರ್ಕಾರ ಮಾಡಿದ ತಿದ್ದುಪಡಿ ಪ್ರಕಾರ, 2017-18ರಿಂದ ದೊಡ್ಡ ಮೊತ್ತದ ಆದಾಯವನ್ನು ತೆರಿಗೆಯಿಂದ ತಪ್ಪಿಸಿದ ಆರೋಪವಿದ್ದರೆ 10 ವರ್ಷಗಳ ತನಕದ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಕೇಳಬಹುದಾಗಿದೆ.